alex Certify FASTag ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮಾಸಿಕ ಪಾಸ್ ಗೂ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FASTag ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮಾಸಿಕ ಪಾಸ್ ಗೂ ಅವಕಾಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಬಳಕೆದಾರರಿಗೆ ಹೊಸದೊಂದು ವ್ಯವಸ್ಥೆ ಕಲ್ಪಿಸಿದೆ. ಫಾಸ್ಟ್ಯಾಗ್ ಅನ್ನು ಮಾಸಿಕ ಪಾಸ್ ಅನ್ನಾಗಿ ಪರಿವರ್ತಿಸುವ ಅವಕಾಶ ನೀಡಲಾಗಿದೆ.

ಟೋಲ್ ಪ್ಲಾಜಾದಲ್ಲಿ ಪದೇ ಪದೇ ಸಂಚರಿಸುವ ವಾಹನಗಳು ನಿಗದಿತ ಶುಲ್ಕ ಪಾವತಿಸುವ ಬದಲಿಗೆ ರಿಯಾಯಿತಿ ಶುಲ್ಕವನ್ನು ಪಾವತಿಸಿ ಟೋಲ್ ಮೂಲಕ ಸಂಚರಿಸಲು ಅವಕಾಶ ನೀಡಲು ಫಾಸ್ಟ್ಯಾಗ್ ಅನ್ನು ಮಾಸಿಕ ಪಾಸ್ ಅನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ.

ಫಾಸ್ಟ್ಯಾಗ್ ಬಳಕೆದಾರರು www.ihmcl.co.in ವೆಬ್ ಸೈಟ್ ಗೆ ಭೇಟಿ ನೀಡಿ ಫಾಸ್ಟ್ಯಾಗ್ ಮಂತ್ಲಿ ಪಾಸ್ ಲಿಂಕ್ ಕ್ಲಿಕ್ ಮಾಡಬೇಕು. ಟೋಲ್ ಪ್ಲಾಜಾ ಆಯ್ಕೆ ಮಾಡಿ, ಫಾಸ್ಟ್ಯಾಗ್ ಐಡಿ ಅಥವಾ ವಾಹನ ಸಂಖ್ಯೆ ನಮೂದಿಸಿದರೆ ನಿಮ್ಮ ಫಾಸ್ಟ್ಯಾಗ್ ಮಾಸಿಕ ಪಾಸಾಗಿ ಪರಿವರ್ತನೆಯಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...