alex Certify ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ರೈತರಿಗೆ BSY ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ರೈತರಿಗೆ BSY ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರೈತರಿಗೆ ಬಂಪರ್ ಕೊಡುಗೆ ನೀಡಿರುವ ಕರ್ನಾಟಕ ಸರ್ಕಾರ ರೈತರ ಬೆಳೆದ ಆಹಾರ ಪದಾರ್ಥಗಳ ನೇರ ಖರೀದಿಗೆ ಅವಕಾಶ ನೀಡಿದೆ.

ಆಹಾರ ಸಂಸ್ಕರಣಾ ಘಟಕಗಳಿಂದ ಖರೀದಿಗೆ ಅವಕಾಶ ಕಲ್ಪಿಸಲಾಗುವುದು. ರೈತರು ಬೆಳೆದ ಆಹಾರ ಪದಾರ್ಥಗಳ ನೇರ ಖರೀದಿಸಬಹುದಾಗಿದ್ದು, ಹೊರ ರಾಜ್ಯಗಳ ಡೀಲರ್ ಗಳಿಗೆ ಕರ್ನಾಟಕದಿಂದ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು.

ಆಹಾರ ಸಂಸ್ಕರಣೆಗೆ ಬೇಕಾದ ತರಕಾರಿ, ಹಣ್ಣು ಖರೀದಿಸಲಾಗುವುದು. ರೈತರು, ಸಂಸ್ಕರಣಾ ಘಟಕದವರು ಓಡಾಡಲು ಅವಕಾಶ ನೀಡಲಾಗುವುದು. ರಾಜ್ಯ ಕೃಷಿ ಇಲಾಖೆ ಕಾರ್ಯದರ್ಶಿಯಿಂದ ಈ ಮಾಹಿತಿ ನೀಡಲಾಗಿದೆ. ಆಹಾರ ಸಂಸ್ಕರಣೆ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಲಾಗಿದೆ.

ಅದೇ ರೀತಿ ಪಶು ಆಹಾರ ತಯಾರಿಕೆಗೆ ಅಗತ್ಯವಾದ ಮೆಕ್ಕೆಜೋಳವನ್ನು 1 ವರ್ಷದ ಅವಧಿಗೆ ರೈತರಿಂದ ಖರೀದಿಸಲು ವಿನಾಯಿತಿ ನೀಡಲಾಗಿದೆ. ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ಕ್ವಿಂಟಾಲ್ ಗೆ 1760 ರೂಪಾಯಿ ದರದಲ್ಲಿ ಕೆಎಂಎಫ್ ಖರೀದಿಸಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...