alex Certify ಬೆಳೆ ಸಾಲ: ರೈತರಿಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳೆ ಸಾಲ: ರೈತರಿಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಬ್ಯಾಂಕುಗಳಿಂದ ಪಡೆದ ಬೆಳೆ ಸಾಲ ಮರುಪಾವತಿ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ.

ಲಾಕ್ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮೇ 31 ರವರೆಗೆ ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಿಸಲಾಗಿತ್ತು. ಈಗ ಆಗಸ್ಟ್ 31 ರ ವರೆಗೆ ಸಾಲ ಮರುಪಾವತಿಗೆ ಅವಕಾಶ ನೀಡಲಾಗಿದೆ. ಸಾಲ ಮರುಪಾವತಿ ಮಾಡಿದವರಿಗೆ ಬಡ್ಡಿ ರಿಯಾಯಿತಿ ಸಿಗಲಿದೆ.

ಶೇಕಡ 4 ರಷ್ಟು ಬಡ್ಡಿದರದಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದ ರೈತರು ಆಗಸ್ಟ್ 31 ರ ವರೆಗೆ ದಂಡವಿಲ್ಲದೆ ಸಾಲ ಮರುಪಾವತಿಸಬಹುದಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಕೃಷಿ ಸಾಲಕ್ಕೆ ಶೇಕಡ 9 ರ ಬಡ್ಡಿ ದರ ಇದೆ. 3 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡ 2 ರಷ್ಟು ರಿಯಾಯಿತಿ ಇದ್ದು, ರೈತರಿಗೆ ಶೇಕಡ 7 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇದೆ. ಸಕಾಲಕ್ಕೆ ಸಾಲ ಮರುಪಾವತಿಸಿದ ರೈತರಿಗೆ ಶೇಕಡ 3ರಷ್ಟು ಹೆಚ್ಚುವರಿ  ಬಡ್ಡಿ ರಿಯಾಯಿತಿ ನೀಡಲಾಗುವುದು. ಹೀಗಾಗಿ ರೈತರಿಗೆ ಶೇಕಡ 4 ರ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಈ ಸಾಲ ಮರು ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...