alex Certify ʼ007ʼ ನಂಬರ್​ಗಾಗಿ ಬರೋಬ್ಬರಿ 34 ಲಕ್ಷ ರೂಪಾಯಿ ಪಾವತಿಸಿದ ಜೇಮ್ಸ್‌ ಬಾಂಡ್‌ ಅಭಿಮಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼ007ʼ ನಂಬರ್​ಗಾಗಿ ಬರೋಬ್ಬರಿ 34 ಲಕ್ಷ ರೂಪಾಯಿ ಪಾವತಿಸಿದ ಜೇಮ್ಸ್‌ ಬಾಂಡ್‌ ಅಭಿಮಾನಿ…!

ಅಹಮದಾಬಾದ್​ನ ಆಶಿಕ್​ ಎಂಬಾತ ಜೇಮ್ಸ್​ ಬಾಂಡ್​ ಮೇಲಿನ ಪ್ರೀತಿಯನ್ನ ತೋರಿಸಲಿಕ್ಕೋಸ್ಕರ ತನ್ನ ಹೊಸ ಎಸ್​​ಯುವಿ ಕಾರಿನ ನಂಬರ್​ ಪ್ಲೇಟ್​ನಲ್ಲಿ 007 ಸಂಖ್ಯೆಯ ನಂಬರ್​ನ್ನ ಬರೆಸಿದ್ದಾರೆ.

ಅಂದಹಾಗೆ ಈ ಫ್ಯಾನ್ಸಿ ನಂಬರ್​ ಪಡೆಯಲು 28 ವರ್ಷದ ಆಶಿಕ್​ ಪಟೇಲ್​ ಖರ್ಚು ಮಾಡಿದ್ದು ಬರೋಬ್ಬರಿ 34 ಲಕ್ಷ ರೂಪಾಯಿ. ಹೊಸ ಎಸ್ಯುವಿ ಕಾರಿಗೆ ಆಶಿಕ್​ 39.5 ಲಕ್ಷ ರೂಪಾಯಿ ಪಾವತಿಸಿದ್ದಾರೆ.

ಒಂದು ಕಾರಿನ ನಂಬರ್​ಗೆ ಇಷ್ಟೊಂದು ಹಣ ಪಾವತಿ ಮಾಡಿದ್ದೇಕೆ ಎಂದು ಕೇಳಿದ್ರೆ……ಈ ಸಂಖ್ಯೆ ನನಗೆ ಶುಭವನ್ನ ತಂದುಕೊಟ್ಟಿದೆ. ಹೀಗಾಗಿಯೇ ನಾನು ಅಷ್ಟು ಮೊತ್ತ ಪಾವತಿಸಿ ಈ ನಂಬರ್​ ಪಡೆದಿದ್ದೇನೆ ಎಂದು ಹೇಳಿದ್ರು.

ಈ 007 ನಂಬರ್​ಗಾಗಿ ಆಶಿಕ್​ ಹಾಗೂ ಮತ್ತೊಬ್ಬ ವ್ಯಕ್ತಿಯ ನಡುವೆ 25 ಸಾವಿರ ರೂಪಾಯಿಯಿಂದ ಹರಾಜು ಪ್ರಕ್ರಿಯೆ ಶುರುವಾಗಿತ್ತು. ಇದರಲ್ಲಿ ಆಶಿಕ್​ 34 ಲಕ್ಷ ರೂಪಾಯಿ ಅಂತಿಮ ಬಿಡ್​ ಮಾಡಿ ಈ ಲಕ್ಕಿ ನಂಬರ್​ನ್ನ ತಮ್ಮದಾಗಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...