ಅಹಮದಾಬಾದ್ನ ಆಶಿಕ್ ಎಂಬಾತ ಜೇಮ್ಸ್ ಬಾಂಡ್ ಮೇಲಿನ ಪ್ರೀತಿಯನ್ನ ತೋರಿಸಲಿಕ್ಕೋಸ್ಕರ ತನ್ನ ಹೊಸ ಎಸ್ಯುವಿ ಕಾರಿನ ನಂಬರ್ ಪ್ಲೇಟ್ನಲ್ಲಿ 007 ಸಂಖ್ಯೆಯ ನಂಬರ್ನ್ನ ಬರೆಸಿದ್ದಾರೆ.
ಅಂದಹಾಗೆ ಈ ಫ್ಯಾನ್ಸಿ ನಂಬರ್ ಪಡೆಯಲು 28 ವರ್ಷದ ಆಶಿಕ್ ಪಟೇಲ್ ಖರ್ಚು ಮಾಡಿದ್ದು ಬರೋಬ್ಬರಿ 34 ಲಕ್ಷ ರೂಪಾಯಿ. ಹೊಸ ಎಸ್ಯುವಿ ಕಾರಿಗೆ ಆಶಿಕ್ 39.5 ಲಕ್ಷ ರೂಪಾಯಿ ಪಾವತಿಸಿದ್ದಾರೆ.
ಒಂದು ಕಾರಿನ ನಂಬರ್ಗೆ ಇಷ್ಟೊಂದು ಹಣ ಪಾವತಿ ಮಾಡಿದ್ದೇಕೆ ಎಂದು ಕೇಳಿದ್ರೆ……ಈ ಸಂಖ್ಯೆ ನನಗೆ ಶುಭವನ್ನ ತಂದುಕೊಟ್ಟಿದೆ. ಹೀಗಾಗಿಯೇ ನಾನು ಅಷ್ಟು ಮೊತ್ತ ಪಾವತಿಸಿ ಈ ನಂಬರ್ ಪಡೆದಿದ್ದೇನೆ ಎಂದು ಹೇಳಿದ್ರು.
ಈ 007 ನಂಬರ್ಗಾಗಿ ಆಶಿಕ್ ಹಾಗೂ ಮತ್ತೊಬ್ಬ ವ್ಯಕ್ತಿಯ ನಡುವೆ 25 ಸಾವಿರ ರೂಪಾಯಿಯಿಂದ ಹರಾಜು ಪ್ರಕ್ರಿಯೆ ಶುರುವಾಗಿತ್ತು. ಇದರಲ್ಲಿ ಆಶಿಕ್ 34 ಲಕ್ಷ ರೂಪಾಯಿ ಅಂತಿಮ ಬಿಡ್ ಮಾಡಿ ಈ ಲಕ್ಕಿ ನಂಬರ್ನ್ನ ತಮ್ಮದಾಗಿಸಿಕೊಂಡಿದ್ದಾರೆ.