ಹರಿದು ಹೋದ ನೋಟುಗಳು ಕೈ ಸೇರಿತು ಅಂದ್ರೆ ಅದೊಂದು ದೊಡ್ಡ ತಲೆನೋವೇ ಸರಿ. ಅಂಗಡಿಗಳಲ್ಲಿ, ಆಟೋ, ಪೆಟ್ರೋಲ್ ಬಂಕ್ ಹೀಗೆ ಎಲ್ಲಿಯೂ ಕೂಡ ಈ ಹರಿದು ಹೋದ ನೋಟುಗಳನ್ನ ಮುಟ್ಟುವವರಿಲ್ಲ. ಆದರೆ ಈ ಹರಿದು ಹೋದ, ಕಲೆಯಾದ, ಸುಟ್ಟು ಹೋದ ಒಟ್ನಲ್ಲಿ ಹಾಳಾದ ಎಲ್ಲಾ ನೋಟುಗಳನ್ನ ನೀವು ನಿಮ್ಮ ಹತ್ತಿರದ ಬ್ಯಾಂಕ್ಗೆ ಹೋಗಿ ಕ್ಷಣ ಮಾತ್ರದಲ್ಲಿ ಬದಲಾಯಿಸಿಕೊಂಡು ಬರಬಹುದಾಗಿದೆ.
ಪ್ರತಿಯೊಂದು ಬ್ಯಾಂಕ್ಗಳು ಗ್ರಾಹಕರಿಂದ ಹಾಳಾದ ನೋಟುಗಳನ್ನ ಪಡೆದು ಅವರಿಗೆ ಯಾವುದೇ ಶುಲ್ಕವನ್ನ ವಿಧಿಸದೇ ಹೊಸ ನೋಟುಗಳನ್ನ ನೀಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆಯನ್ನ ನೀಡಿದೆ.
ಆಂಧ್ರ ಪ್ರದೇಶದ ಕೃಷ್ಣಾ ಎಂಬಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ನೋಟಿಗೆ ಗೆದ್ದಲು ಹಿಡಿದ ವರದಿ ಬಳಿಕ ಈಗ ಅನೇಕರು ಮನೆಯಲ್ಲಿ ತಾವು ಎತ್ತಿಟ್ಟಿರುವ ಹಣ ಒಳ್ಳೆ ಸ್ಥಿತಿಯಲ್ಲಿದ್ಯೋ ಇಲ್ವೋ ಅಂತಾ ನೋಡಿಕೊಳ್ಳುವ ಹಾಗಾಗಿದೆ. ಸಾಮಾನ್ಯವಾಗಿ ಮನೆಯಲ್ಲಿರುವ ಹಿರಿಯ ನಾಗರಿಕರು ಹಣವನ್ನ ಸಂಗ್ರಹಿಸಿ ಇಡೋ ಗುಣವನ್ನ ಹೊಂದಿರ್ತಾರೆ.
ಮಧ್ಯಮ ವರ್ಗದ ಜನತೆಗೆ ಭರ್ಜರಿ ಗುಡ್ ನ್ಯೂಸ್: ನನಸಾಗಲಿದೆ ಸ್ವಂತ ಸೂರು ಹೊಂದುವ ಕನಸು
ಆರ್ಬಿಐ ನೀಡಿರುವ ಸೂಚನೆಯ ಪ್ರಕಾರ, ಬ್ಯಾಂಕಿಗೆ ನೀವು ಹಾಳಾದ ನೋಟನ್ನ ತೆಗೆದುಕೊಂಡು ಹೋಗುವ ಮುನ್ನ ಅದು ಯಾವ ರೀತಿಯಲ್ಲಿ ಹಾಳಾಗಿದೆ ಅನ್ನೋದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಸಾಮಾನ್ಯ ಮಣ್ಣಿನ ಕಲೆ, ಇಲ್ಲವೇ ನೀರಿನಿಂದ ನೋಟು ಹಾಳಾಗಿದ್ದರೆ ಬ್ಯಾಂಕ್ನಲ್ಲಿ ನಿಮ್ಮ ನೋಟುಗಳನ್ನ ಪಡೆಯಲಾಗುತ್ತದೆ. ಒಂದು ವೇಳೆ ನೋಟು ಹರಿದಿದ್ದರೆ ಅದರಲ್ಲಿ ಯಾವುದೇ ಅವಶ್ಯ ಚಿಹ್ನೆಗಳಿಗೆ ಏನೂ ಆಗಿಲ್ಲ ಅನ್ನೋದನ್ನ ಖಾತ್ರಿ ಪಡಿಸಿಕೊಳ್ಳಿ.
ಒಂದು ವೇಳೇ ನಿಮ್ಮ ಹಣ ಅತ್ಯಂತ ಕೆಟ್ಟದಾಗಿ ಸುಟ್ಟು ಹೋಗಿದ್ದರೆ, ಅಥವಾ ಬೇರ್ಪಡಿಸಲಾಗದೇ ಇದ್ದಂತಹ ಸ್ಥಿತಿಯಲ್ಲಿ ಇದ್ದರೆ, ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ನಿಮ್ಮ ನೋಟುಗಳನ್ನ ಒಪ್ಪಿಕೊಳ್ಳೋದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಇಶ್ಯೂ ಆಫೀಸ್ಗೆ ಈ ನೋಟುಗಳನ್ನ ಒಪ್ಪಿಸಬೇಕಾಗುತ್ತದೆ. ವಿಶೇಷ ಕಾರ್ಯ ವಿಧಾನದ ಅಡಿಯಲ್ಲಿ ನಿಮಗೆ ನೋಟುಗಳನ್ನ ನೀಡಲಾಗುತ್ತದೆ.