alex Certify ಭರ್ಜರಿ ಗುಡ್ ನ್ಯೂಸ್: ಶೇಕಡಾ 50ರಷ್ಟು ʼವೇತನʼ ನಿರುದ್ಯೋಗ ಭತ್ಯೆಯಾಗಿ ಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಶೇಕಡಾ 50ರಷ್ಟು ʼವೇತನʼ ನಿರುದ್ಯೋಗ ಭತ್ಯೆಯಾಗಿ ಪಾವತಿ

ನವದೆಹಲಿ: ಕೊರೊನಾ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನೌಕರರಿಗೆ ನೌಕರರ ರಾಜ್ಯ ವಿಮಾ ನಿಗಮ ಮೂರು ತಿಂಗಳ ಸರಾಸರಿ ವೇತನದ ಶೇಕಡ 50ರಷ್ಟು ನಿರುದ್ಯೋಗ ಲಾಭವಾಗಿ ಪಾವತಿಸಲು ನಿಯಮಗಳನ್ನು ಸಡಿಲಿಸಲು ಮುಂದಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ನೌಕರರ ರಾಜ್ಯ ವಿಮಾ ನಿಗಮ ಮಹತ್ವದ ನಿರ್ಧಾರ ಕೈಗೊಂಡಿದ್ದು, ನೌಕರರ ರಾಜ್ಯ ವಿಮೆ ಯೋಜನೆಯಡಿ ಬರುವ ಕಾರ್ಮಿಕರಿಗೆ ನಿರುದ್ಯೋಗ ಲಾಭವನ್ನು ಪಾವತಿಸುವ ಆಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಜಾರಿಗೊಳಿಸಲಾಗುವುದು.

ಇಎಸ್ಐ ಕಾರ್ಪೊರೇಷನ್ ಸಭೆಯಲ್ಲಿ ಈ ಕುರಿತಾಗಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದ್ದು, ಕೊರೊನಾ ಸಾಂಕ್ರಾಮಿಕ ರೋಗ ಪೀಡಿತ ಕಾರ್ಮಿಕರಿಗೆ ಪರಿಹಾರವನ್ನು ನೀಡಲಾಗುವುದು ಎಂದು ಹೇಳಲಾಗಿದೆ.

2021 ರ ಜೂನ್ 30 ರವರೆಗೆ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ತೀರ್ಮಾನಿಸಲಾಗಿದೆ. ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಈಗಿರುವ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಪ್ರಮಾಣ ಪಡೆಯಲು ನಿಯಮ ಸಡಿಲಿಕೆ ಮಾಡಲಾಗುವುದು. ಮೂರು ತಿಂಗಳ ಸರಾಸರಿ ವೇತನದ 50 ಪ್ರತಿಶತದಷ್ಟು ನಿರುದ್ಯೋಗ ಲಾಭವಾಗಿ ಪಾವತಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...