alex Certify ಪಿಎಫ್ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಫ್ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್

ನವದೆಹಲಿ: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಠೇವಣಿ ಆಧಾರಿತ ವಿಮಾ ಯೋಜನೆಗಳಲ್ಲಿ ಕೆಲ ಬದಲಾವಣೆ ಮಾಡಿದ್ದು 7 ಲಕ್ಷ ರೂಪಾಯಿವರೆಗೂ ವಿಮಾ ಮೊತ್ತ ಹೆಚ್ಚಳ ಮಾಡಲಾಗಿದೆ.

ಎಂಪ್ಲಾಯಿಸ್ ಡಿಪಾಸಿಟ್ ಲಿಂಕ್ಡ್ ಇನ್ಸುರನ್ಸ್(EDLA) ಯೋಜನೆ ಗರಿಷ್ಠ ಮೊತ್ತವನ್ನು 6 ಲಕ್ಷ ರೂಪಾಯಿಯಿಂದ 7 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಭವಿಷ್ಯ ನಿಧಿ ಸಂಸ್ಥೆಯ ಕೇಂದ್ರೀಯ ಮಂಡಳಿ ಟ್ರಸ್ಟಿಗಳ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಭವಿಷ್ಯನಿಧಿ ಕಾರ್ಮಿಕರಿಗೆ ನೀಡಲಾಗುವ ಕಡ್ಡಾಯ ವಿಮಾ ಯೋಜನೆಯಾಗಿರುವ ಠೇವಣಿ ಆಧಾರಿತ ವಿಮಾ ಯೋಜನೆಗೆ ಕಾರ್ಮಿಕರು ವಂತಿಗೆ ನೀಡಬೇಕಿಲ್ಲ. ಉದ್ಯೋಗದಾತರು ಮತ್ತು ಕೇಂದ್ರ ಸರ್ಕಾರ ಈ ಮೊತ್ತವನ್ನು ಭರಿಸುತ್ತವೆ. ನೈಸರ್ಗಿಕ ಕಾರಣ, ಕಾಯಿಲೆ ಅಥವಾ ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ, ನಾಮ ನಿರ್ದೇಶಿತರಿಗೆ ಪರಿಹಾರ ಕೊಡಲಾಗುವುದು. ಕಾರ್ಮಿಕರ ಸಂಬಳವನ್ನು ಆಧರಿಸಿ ಮೊತ್ತ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...