ಉದ್ಯೋಗಿಗಳು ಸಾಮಾನ್ಯವಾಗಿ ತಮ್ಮ ಉದ್ಯೋಗ ಬದಲಾಯಿಸಿದಾಗ ಹಿಂದಿನ ಸಂಸ್ಥೆಯ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸಲು ಮರೆತುಬಿಡುತ್ತಾರೆ. ಕೆಲವರು ಪ್ರೊಸೀಜರ್ಗಳ ಗೋಜಿಗೆ ಹೋಗದೇ ಸುಮ್ಮನಿರುತ್ತಾರೆ. ಆದರೆ ಅತೀ ಸುಲಭದಲ್ಲಿ ತಮ್ಮದೇ ಉಳಿಕೆ ಹಣವನ್ನು ವರ್ಗಾಯಿಸಿಕೊಳ್ಳಲು ಅವಕಾಶವಿದೆ
ಪಿಎಫ್ ಕಚೇರಿಗೆ ತೆರಳುವ ಅವಶ್ಯಕತೆಯೂ ಇಲ್ಲ. ಮನೆಯಲ್ಲಿಯೇ ಆರಾಮವಾಗಿ ಇದ್ದು ಪಿಎಫ್ ನಿಧಿಯನ್ನು ಸುಲಭವಾಗಿ ವರ್ಗಾಯಿಸಬಹುದು.
ನಿಮ್ಮ ಕಚೇರಿ ದಿನಗಳನ್ನ ನೆನಪಿಸುತ್ತೆ ಈ ವಿಶೇಷ ಮೇಣದಬತ್ತಿ..!
ಹಾಗಿದ್ರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.
– ಮೊದಲು ಹಳೆಯ ಪಿಎಫ್ ಖಾತೆಯಿಂದ ಹೊಸ ಪಿಎಫ್ ಖಾತೆಗೆ ಹಣ ವರ್ಗಾಯಿಸಲು, ಅಧಿಕೃತ ಇಪಿಎಫ್ಒ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. https://unifiedportal-mem.epfindia.gov.in/memberinterface.
– ಯುಎಎನ್ ಖಾತೆ ವಿವರ ಬಳಸಿಕೊಂಡು ಲಾಗಿನ್ ಮಾಡಬೇಕು. ಸದಸ್ಯರ ವಿವರ ವಿಭಾಗಕ್ಕೆ ಹೋಗಿ ವೈಯಕ್ತಿಕ ವಿವರಗಳಾದ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಇಮೇಲ್ ಐಡಿ, ಫೋನ್ ಮತ್ತು ಬ್ಯಾಂಕ್ ವಿವರ ಪರಿಶೀಲಿಸಬೇಕು.
– ಹಣವನ್ನು ವರ್ಗಾಯಿಸುವ ಮೊದಲು ಪಾಸ್ಬುಕ್ ಅನ್ನು ಪರಿಶೀಲಿಸಲು ಬಯಸಬಹುದು. ಅದಕ್ಕೂ ಅವಕಾಶ ಕೊಡಲಾಗಿದೆ.
– ಹಿಂದಿನ ಸಂಸ್ಥೆ ಜಾಯಿನಿಂಗ್ ದಿನಾಂಕ ಮತ್ತು ನಿರ್ಗಮನ ದಿನಾಂಕವನ್ನು ಪರಿಶೀಲಿಸಲು ಸರ್ವೀಸ್ ಹಿಸ್ಟರಿ ವಿಭಾಗದ ಆಯ್ಕೆಗೆ ಹೋಗಬೇಕಾಗುತ್ತದೆ.
– ಈಗ ಆನ್ಲೈನ್ ಸೇವೆಗಳಿಗೆ ಹೋಗಿ ‘ಒನ್ ಮೆಂಬರ್ ಒನ್ ಇಪಿಎಫ್ ಅಕೌಂಟ್ (ಟ್ರಾನ್ಸ್ಫರ್ ರಿಕ್ವೆಸ್ಟ್) ಕ್ಲಿಕ್ ಮಾಡಿದರೆ ಮುಂದಿನ ಪುಟದಲ್ಲಿ ವೈಯಕ್ತಿಕ ವಿವರಗಳು, ಪ್ರಸ್ತುತ ಪಿಎಫ್ ಖಾತೆಯ ಬಗ್ಗೆ ಮಾಹಿತಿ ಕಾಣಬಹುದು.
– ಅಲ್ಲೇ ಕೆಳ ಭಾಗದಲ್ಲಿ ಎಲ್ಲ ಉದ್ಯೋಗದಾತರ ವಿವರಗಳನ್ನು ನೋಡಲು ಅವಕಾಶ ಮಾಡಿಕೊಡಲಾಗಿದೆ.
– ಯುಎಎನ್ ವಿವರಗಳನ್ನು ನಮೂದಿಸಿ ನಂತರ ಹಿಂದಿನ ಉದ್ಯೋಗದಾತರ ಎಲ್ಲಾ ಪಿಎಫ್ ಐಡಿಗಳನ್ನು ತೋರಿಸುತ್ತದೆ. ಹಣವನ್ನು ಹೊರತೆಗೆಯಲು ಬಯಸುವ ಪಿಎಫ್ ಐಡಿಗಳನ್ನು ಆಯ್ಕೆ ಮಾಡಿ ಮತ್ತು ಆಯ್ಕೆಯನ್ನು ಒಟಿಪಿ ಮೂಲಕ ಪರಿಶೀಲಿಸಬಹುದು.
– ಮುಂದಿನ ದೃಢೀಕರಣ ಹಂತ ಪೂರೈಸಿದ ಬಳಿಕ ಪ್ರಿಂಟೌಟ್ ತೆಗೆದುಕೊಂಡು ಅದನ್ನು ಹಾಲಿ ಕಾರ್ಯನಿರ್ವಹಿಸುವ ಕಂಪನಿಗೆ ಸಲ್ಲಿಸಬಹುದು, ನಂತರ ಅದನ್ನು ಅನುಮೋದನೆಗಾಗಿ ಪಿಎಫ್ ಕಚೇರಿಗೆ ಕಳುಹಿಸಬಹುದು.
– 7ರಿಂದ10 ದಿನದೊಳಗೆ ಪಿಎಫ್ ಪಾಸ್ಬುಕ್ ಅನ್ನು ಹೊಸ ಬ್ಯಾಲೆನ್ಸ್ನೊಂದಿಗೆ ನವೀಕರಿಸಲಾಗುತ್ತದೆ.