![](https://kannadadunia.com/wp-content/uploads/2021/01/1566815898-Elon_Musk_Reuters.jpg)
ಟ್ವಿಟರ್ಗೆ ವಾಪಸ್ಸಾಗುತ್ತಿದ್ದಂತೆಯೇ ಎಲಾನ್ ಮಸ್ಕ್ ಕಂಪನಿಯೊಂದರ ಹಣೆಬರಹವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಟ್ವಿಟರ್ನಲ್ಲಿ ಎಲಾನ್ ಮಸ್ಕ್ ಡಾಗ್ ಕಾಯಿನ್ನ್ನು ತನ್ನ ಇಷ್ಟವಾದ ಕ್ರಿಪ್ಟೋ ಕರೆನ್ಸಿ ಎಂದು ಹೇಳಿದ್ದಾರೆ.
ಅವರು ತಮ್ಮ ಟ್ವೀಟ್ ಜೊತೆಗೆ ಒಂದು ಗ್ರಾಫಿಕ್ಸ್ನ್ನೂ ಶೇರ್ ಮಾಡಿದ್ದಾರೆ. ಈ ಗ್ರಾಫಿಕ್ಸ್ನಲ್ಲಿ ಡಾಗ್ ಕಾಯಿನ್ ಲೋಗೋದ ಜೊತೆಗೆ ಒಂದು ದೊಡ್ಡ ಪರ್ವತದ ತುತ್ತ ತುದಿಯಲ್ಲಿ ನಿಂತಿದ್ದಾರೆ.
ಇಷ್ಟೇ ಅಲ್ಲ, ಡಾಗ್ ಕಾಯಿನ್ ವಿಚಾರವಾಗಿ ಎಲಾನ್ ಮಸ್ಕ್ ಒಂದು ಗಂಟೆಯ ಅವಧಿಯಲ್ಲಿ 9 ಟ್ವೀಟ್ಗಳನ್ನ ಮಾಡಿದ್ದಾರೆ. ಮಸ್ಕ್ರ ಈ ಟ್ವೀಟ್ ಬಳಿಕ ನೆಟ್ಟಿಗರು ಮಸ್ಕ್ರನ್ನ ಡಾಗ್ ಕಾಯಿನ್ ಸಿಇಓ ಎಂದು ಘೋಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಡಾಗ್ ಕಾಯಿನ್ ಅನ್ನೋದು ಒಂದು ಕ್ರಿಪ್ಟೋ ಕರೆನ್ಸಿ ಆಗಿದೆ. ಮಸ್ಕ್ರ ಸರಣಿ ಟ್ವೀಟ್ ಪೋಸ್ಟ್ ಮಾಡಿ 45 ನಿಮಿಷಗಳ ಬಳಿಕ ಕಂಪನಿಯ ಶೇರ್ ಸರಿ ಸುಮಾರು 60 ಪ್ರತಿಶತ ವೇಗದಲ್ಲಿ ಏರಿಕೆ ಕಂಡಿದೆ.
ಎಲಾನ್ ಮಸ್ಕ್ ಕಳೆದು ತಿಂಗಳು ಅಮೆಜಾನ್ ಸಿಇಓ ಜೆಫ್ ಬೆಜೋಸ್ರನ್ನ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನ ಅಲಂಕರಿಸಿದ್ರು. ಇದಾದ ಬಳಿಕ ಟ್ವಿಟರ್ನಲ್ಲಿ ಮಸ್ಕ್ ಟ್ವಿಟರ್ನಲ್ಲಿ ಹಂಚಿಕೊಳ್ಳುವ ಪ್ರತಿಯೊಂದು ಕಂಪನಿಯೂ ಅತ್ಯುತ್ತಮ ಲಾಭ ಗಳಿಸುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಮೀಮ್ಸ್ ಸುರಿಮಳೆಯೇ ಹರಿದಿದೆ.