ಹಣದುಬ್ಬರ ವಿದ್ಯುತ್ ಉಪಕರಣಗಳ ಮೇಲೂ ಪರಿಣಾಮ ಬೀರಿದೆ. ವೆಚ್ಚ ಹೆಚ್ಚಾಗ್ತಿದ್ದಂತೆ ವಿದ್ಯುತ್ ಸರಕುಗಳ ಬೆಲೆ ದುಬಾರಿಯಾಗಲಿವೆ. ಮುಂದಿನ ತಿಂಗಳಿನಿಂದ ಎಸಿ, ಕೂಲರ್ ಮತ್ತು ಫ್ಯಾನ್ ಬೆಲೆಗಳ ಏರಿಕೆಯಾಗಲಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳು ಆರಂಭವಾಗ್ತಿದ್ದಂತೆ ಇವುಗಳ ಬೆಲೆ ಹೆಚ್ಚಾಗಲಿದೆ.
ಬೇಸಿಗೆ ಶುರುವಾಗ್ತಿದ್ದಂತೆ ಎಸಿಗೆ ಬೇಡಿಕೆ ಹೆಚ್ಚಾಗುತ್ತದೆ. ಮುಂದಿನ ತಿಂಗಳು ಎಸಿ ಖರೀದಿ ಪ್ಲಾನ್ ಮಾಡಿದ್ದರೆ ಈ ತಿಂಗಳೇ ಎಸಿ ಖರೀದಿ ಮಾಡಿ. ಯಾಕೆಂದ್ರೆ ಮುಂದಿನ ತಿಂಗಳು ಎಸಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ವೆಚ್ಚದ ಹೆಚ್ಚಳದಿಂದಾಗಿ ಎಸಿ ಬೆಲೆ ಶೇಕಡಾ 4ರಿಂದ 6ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಂದ್ರೆ ಎಸಿ ಬೆಲೆ 1500ರಿಂದ ಎರಡು ಸಾವಿರ ರೂಪಾಯಿವರೆಗೆ ಏರಿಕೆಯಾಗಲಿದೆ.
ಸಿಲಿಂಡರ್ ʼಸಬ್ಸಿಡಿʼ ಮಾಹಿತಿ ತಿಳಿಯೋದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ
ಪಾಲಿಮರ್, ತಾಮ್ರ, ಉಕ್ಕು, ಪ್ಯಾಕೇಜಿಂಗ್ ವಸ್ತುಗಳ ಬೆಲೆ ಹೆಚ್ಚಾಗಿದೆ. ತಾಮ್ರದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಈ ಎಲ್ಲಾ ಕಾರಣಗಳಿಗಾಗಿ ವಿದ್ಯುತ್ ಗೃಹೋಪಯೋಗಿ ವಸ್ತುಗಳು ದುಬಾರಿಯಾಗಲಿವೆ. ಕೂಲರ್‌ನ ಬೆಲೆ 1 ಸಾವಿರ ರೂಪಾಯಿಗಳವರೆಗೆ ಹೆಚ್ಚಾಗಲಿದೆ. ತಾಮ್ರ ದುಬಾರಿಯಾಗಿರುವ ಕಾರಣ ಫ್ಯಾನ್ ಬೆಲೆ ಕೂಡ ಹೆಚ್ಚಾಗಿದೆ.