alex Certify ಸಿಲಿಂಡರ್ ʼಸಬ್ಸಿಡಿʼ ಮಾಹಿತಿ ತಿಳಿಯೋದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಲಿಂಡರ್ ʼಸಬ್ಸಿಡಿʼ ಮಾಹಿತಿ ತಿಳಿಯೋದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳೂ ಬೆಲೆ ಪರಿಷ್ಕರಿಸುತ್ತಿದೆ. ಕೇಂದ್ರವು ತಮ್ಮ ಮನೆಯ ಸಿಲಿಂಡರ್‌ಗೆ ಸಬ್ಸಿಡಿ ಕೊಡುತ್ತಿದೆಯೋ ಇಲ್ಲವೋ ಎಂಬ ಅನುಮಾನ ಅನೇಕರಲ್ಲಿದೆ.

ನಿಯಮಗಳ ಪ್ರಕಾರ ವರ್ಷದಲ್ಲಿ 14.2 ಕೆಜಿಯ 12 ಸಿಲಿಂಡರ್‌ಗಳನ್ನು ಸಬ್ಸಿಡಿಯಲ್ಲಿ ಕೇಂದ್ರ ನೀಡುತ್ತಾ ಬಂದಿದೆ. ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸುತ್ತಿದೆ. ಆದರೆ ಈಗ ಸರ್ಕಾರ ಸಬ್ಸಿಡಿ ಹಣವನ್ನು ಪಾವತಿಸುತ್ತಿಲ್ಲವೆಂದು ಹೇಳಲಾಗಿದೆ. ಹಾಗಿದ್ದರೆ ಈವರೆಗೆ ನಿಮಗೆ ಎಷ್ಟು ಸಬ್ಸಿಡಿ ಸಿಕ್ಕಿದೆ ಎಂಬುದನ್ನು ತಿಳಿಯುವ ಸಮಯವಿದು.

ಐಒಸಿಎಲ್, ಎಚ್‌ಪಿ ಮತ್ತು ಬಿಪಿಸಿಎಲ್ ಸರ್ಕಾರಿ ಸ್ವಾಮ್ಯದ ಕಂಪನಿಗಳ ಗ್ಯಾಸ್ ಸಿಲಿಂಡರ್ ಬಳಕೆದಾರರಾಗಿದ್ದರೆ, ಬ್ಯಾಂಕ್ ಖಾತೆಗೆ ಸಬ್ಸಿಡಿ ವರ್ಗಾವಣೆಯಾಗಿದೆಯೇ ಎಂದು ಏಕೀಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಮೂಲಕ ಪರಿಶೀಲಿಸಬಹುದು.

ಶುಭ ಸುದ್ದಿ: ಪ್ರತಿ ತಿಂಗಳು ಖಾತೆಗೆ 3 ಸಾವಿರ ರೂ. ಜಮಾ, PM-SYM ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

– Http://mylpg.in/ ಗೆ ಹೋಗಿ ಅಲ್ಲಿನ ಬಲಭಾಗದಲ್ಲಿ ಗ್ರಾಹಕರ ಎಲ್ಪಿಜಿ ಐಡಿ ನಮೂದಿಸಿ, ಬಳಕೆದಾರರ ವಿವರ ಭರ್ತಿ ಮಾಡಬೇಕಾಗುತ್ತದೆ.

– ಬಳಿಕ ಕ್ಯಾಪ್ಚಾ ಕೋಡ್‌ ನಮೂದಿಸಿ ಮುಂದುವರಿಸಿದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ.

– ಮುಂದಿನ ಪುಟದಲ್ಲಿ, ಇಮೇಲ್ ಐಡಿಯನ್ನು ನಮೂದಿಸಿ ಮತ್ತು ಪಾಸ್ವರ್ಡ್ ರಚಿಸಿದರೆ ಆ ಇಮೇಲ್ ಐಡಿಯಲ್ಲಿ ರಿಕ್ವೆಸ್ಟ್ ಸಕ್ರಿಯಗೊಳಿಸುವ ಲಿಂಕ್ ಬಂದಿರುತ್ತದೆ.

– ಆ ಲಿಂಕ್ ಕ್ಲಿಕ್ ಮಾಡಿದರೆ ಖಾತೆ ಸಕ್ರಿಯಗೊಳ್ಳುತ್ತದೆ. ಈಗ mylpg.in ಖಾತೆಗೆ ಲಾಗಿನ್ ಮಾಡಬಹುದು.

– ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ನಮೂದಿಸಿ ಪಾಪ್ ಅಪ್ ವಿಂಡೋದಲ್ಲಿನ ಎಲ್ಪಿಜಿ ಖಾತೆಗೆ ಕ್ಲಿಕ್ ಮಾಡಿದರೆ ಸಿಲಿಂಡರ್ ಬುಕಿಂಗ್ ಹಿಸ್ಟರಿ ವೀಕ್ಷಿಸಿ/ ಸಬ್ಸಿಡಿ ವರ್ಗಾಯಿಸಲಾಗಿದೆಯೇ ಎಂಬ ಮಾಹಿತಿ ತಿಳಿಯುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...