ರೇಷ್ಮೆ ರಾಖಿಯಿಲ್ಲವೆಂದ್ರೆ ಬರೀ ದಾರ ಕಟ್ಟಿ ರಾಖಿ ಹಬ್ಬ ಆಚರಿಸಿ. ಹೀಗೆಂಬ ಸಂದೇಶದ ಜೊತೆ ಚೀನಾ ವಿರುದ್ಧ ಅಭಿಯಾನ ಶುರುವಾಗಿದೆ. ಹಿಂದೂಸ್ತಾನಿ ರಾಖಿ ಹೆಸರಿನಲ್ಲಿ ಆಚರಿಸಲಾಗ್ತಿದೆ. ಚೀನಾದಲ್ಲಿ ತಯಾರಿಸಿದ ಯಾವುದೇ ಸರಕುಗಳನ್ನು ರಾಖಿ ತಯಾರಿಸಲು ಅಥವಾ ಮಾರಾಟ ಮಾಡಲು ಬಳಸಲಾಗುವುದಿಲ್ಲ. ಈ ಸಂದೇಶವನ್ನು ದೇಶಾದ್ಯಂತ ಹರಡಲು, ಜೂನ್ 10 ರಿಂದ ದೆಹಲಿ ಸೇರಿದಂತೆ ಎಲ್ಲೆಡೆ ʼಭಾರತೀಯ ಸರಕುಗಳು-ನಮ್ಮ ಹೆಮ್ಮೆʼ ಎಂಬ ಘೋಷಣೆಯಡಿ ಅಭಿಯಾನ ಶುರುವಾಗಿದೆ.
ಈ ಅಭಿಯಾನ ಪ್ರಾರಂಭವಾದ ನಂತರ ಚೀನಾ ವಸ್ತುಗಳನ್ನು ಸಂಪೂರ್ಣ ಬ್ಯಾನ್ ಮಾಡಿದ ಮೊದಲ ಹಬ್ಬ ರಾಖಿ ಹಬ್ಬವಾಗಲಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಮೂಲಕ ಚೀನಾಕ್ಕೆ ದೊಡ್ಡ ಪಾಠವನ್ನು ನೀಡಲು ದೇಶ ಮುಂದಾಗಿದೆ. ರಾಖಿಯ ಈ ಹಬ್ಬದಿಂದ ಚೀನಾಕ್ಕೆ ಸುಮಾರು 4 ಸಾವಿರ ಕೋಟಿ ರೂಪಾಯಿಗಳ ವ್ಯಾಪಾರ ನಷ್ಟವಾಗಲಿದೆ.
ಅಂದಾಜಿನ ಪ್ರಕಾರ, ದೇಶದಲ್ಲಿ ರಾಖಿ ಹಬ್ಬದ ಸಂದರ್ಭದಲ್ಲಿ ಸುಮಾರು 6 ಸಾವಿರ ಕೋಟಿ ರಾಖಿಗಳ ವ್ಯಾಪಾರ ನಡೆಯುತ್ತದೆ. ಇದರಲ್ಲಿ ಚೀನಾದ ಪಾಲು 4 ಸಾವಿರ ಕೋಟಿ. ರಾಖಿ ತಯಾರಿಸುವ ವಸ್ತುಗಳು ಫೋಮ್, ಪೇಪರ್ ಫಾಯಿಲ್, ರಾಖಿ ದಾರ, ಮುತ್ತುಗಳು, ರಾಖಿಯ ಮೇಲಿರುವ ಅಲಂಕಾರಿಕ ವಸ್ತುಗಳು ಇತ್ಯಾದಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ರಾಖಿ ತಯಾರಿಕೆಯಿಂದ ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಅವ್ರ ಪ್ರತಿಭೆ ಹೊರಬರಲಿದ್ದು, ಮೋದಿಯವರ ʼಲೋಕಲ್ ಆನ್ ವೋಕಲ್’ ಮತ್ತು ‘ಸ್ವಾವಲಂಬಿ ಭಾರತ’ದ ಕರೆಯನ್ನು ಈಡೇರಿಸುವ ದೊಡ್ಡ ಹೆಜ್ಜೆಯಾಗಲಿದೆ.