ದೇಶದ ಆರ್ಥಿಕ ಪ್ರಗತಿಯು ಕೋವಿಡ್-19 ಲಸಿಕೆ ಕಾರ್ಯಕ್ರಮದ ಅನುಷ್ಠಾನದ ವೇಗವನ್ನು ಅವಲಂಬಿಸಿದೆ ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 16ರಂದು ಬಿಡುಗಡೆ ಮಾಡಿದ ತನ್ನ ಮಾಸಿಕ ಬುಲೆಟಿನ್ ಮೂಲಕ ತಿಳಿಸಿದೆ.
ಬೆಚ್ಚಿಬೀಳಿಸುವಂತಿದೆ ಮಾಜಿ ಪ್ರೇಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಕೃತ್ಯ
“ಮುಂದಿನ ದಿನಗಳಲ್ಲಿ ಲಸಿಕಾ ಕಾರ್ಯಕ್ರಮದ ವೇಗ ಹಾಗೂ ಮಟ್ಟವು ಆರ್ಥಿಕ ಚೇತರಿಕೆಯ ಗತಿಯನ್ನು ನಿರ್ಧರಿಸಲಿದೆ. ಹಿಂದಿನಿಂದ ಚಾಲ್ತಿಯಲ್ಲಿರುವ ಅಡಚಣೆಗಳನ್ನು ಮೀರಿ ಸಾಂಕ್ರಮಿಕದ ಸಂಕಷ್ಟದಿಂದ ಆರ್ಥಿಕತೆಯ ಪುಟಿದೇಳುವ ಕ್ಷಮತೆ ಹೊಂದಿದೆ” ಎಂದು ಆರ್‌ಬಿಐ ತನ್ನ ಬುಲೆಟಿನ್ ಮೂಲಕ ತಿಳಿಸಿದೆ.
ಯಡಿಯೂರಪ್ಪರನ್ನು ಇಟ್ಟುಕೊಳ್ತೀರಾ..? ಕಿತ್ತು ಹಾಕ್ತೀರಾ…? ಶೀಘ್ರವೇ ನಿರ್ಧರಿಸಿ; ಸಿದ್ಧರಾಮಯ್ಯ
“ಪ್ರಸಕ್ತ ವಿಶ್ಲೇಷಣೆಯಂತೆ, ಎರಡನೇ ಅಲೆಯಿಂದ ಉಂಟಾದ ನಷ್ಟವು ಮುಖ್ಯವಾಗಿ ದೇಶೀ ಬೇಡಿಕೆ ಮೇಲೆ ಪರಿಣಾಮ ಬೀರಲಿದೆ. ಮತ್ತೊಂದು ಕಡೆಯಲ್ಲಿ, ಪೂರೈಕೆ ಷರತ್ತುಗಳ ಅನೇಕ ಆಯಾಮಗಳಾದ – ಕೃಷಿ ಮತ್ತು ಸಂಪರ್ಕರಹಿತ ಸೇವೆಗಳು ಚೇತರಿಸಿಕೊಳ್ಳುತ್ತಿವೆ. ಇದೇ ವೇಳೆ, ಸಾಂಕ್ರಮಿಕದ ನಿರ್ಬಂಧಗಳ ನಡುವೆಯೂ ಕೈಗಾರಿಕಾ ರಫ್ತುಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಬಹಳಷ್ಟು ವೃದ್ಧಿಯಾಗಿವೆ” ಎಂದು ಆರ್‌ಬಿಐನ ಬುಲೆಟಿನ್ ತಿಳಿಸಿದೆ.