alex Certify BIG NEWS: ಮನೆಯಲ್ಲೇ ಕುಳಿತು ಹಣ ಗಳಿಸುವ ಅವಕಾಶ ನೀಡ್ತಿದೆ ಗೂಗಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನೆಯಲ್ಲೇ ಕುಳಿತು ಹಣ ಗಳಿಸುವ ಅವಕಾಶ ನೀಡ್ತಿದೆ ಗೂಗಲ್

ಟೆಕ್​ ದೈತ್ಯ ಗೂಗಲ್​ ಕಂಪನಿ ಟಾಸ್ಕ್​ ಮೇಟ್​ ಎಂಬ ಅಪ್ಲಿಕೇಶನ್​ವೊಂದರ ಟೆಸ್ಟಿಂಗ್​ ನಡೆಸುತ್ತಿದ್ದು ಇದರ ಸಹಾಯದಿಂದ ಬಳಕೆದಾರರು ಹಣ ಸಂಪಾದನೆ ಮಾಡಬಹುದಾಗಿದೆ.

ಟಾಸ್ಕ್ ಮೇಟ್ ಅಪ್ಲಿಕೇಶನ್​ ಸದ್ಯ ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿದೆ. ಈ ಅಪ್ಲಿಕೇಶನ್​​ನಲ್ಲಿ ಬಳಕೆದಾರರಿಗೆ ಕೆಲ ಟಾಸ್ಕ್​​ಗಳನ್ನ ನೀಡಲಾಗುತ್ತೆ. ಈ ಟಾಸ್ಕ್​ ಪೂರ್ತಿ ಮಾಡಿದ ಬಳಕೆದಾರರಿಗೆ ಗೂಗಲ್​ ಹಣ ನೀಡಲಿದೆ.

ಸದ್ಯ ಬೀಟಾ ಟೆಸ್ಟಿಂಗ್​ ಫೇಸ್​ನಲ್ಲಿರುವ ಈ ಅಪ್ಲಿಕೇಶನ್​ ಬಳಕೆದಾರರಿಗೆ ಫೋಟೋ, ಸ್ಥಳ ಗುರುತಿಸುವ ಇಲ್ಲವೇ ಅನುವಾದ ಮಾಡುವ ಟಾಸ್ಕ್​ಗಳನ್ನ ನೀಡುತ್ತೆ. ಇದರಲ್ಲಿ ಉತ್ತೀರ್ಣರಾದವರಿಗೆ ಹಣ ನೀಡುವ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಈ ಅಪ್ಲಿಕೇಶನ್​ ಪ್ರತಿಯೊಬ್ಬರ ಬಳಕೆಗೂ ಸಿಗಲಿದೆ ಅಂತಾ ಗೂಗಲ್​ ಸಂಸ್ಥೆ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...