alex Certify ನಿಮ್ಮ ‘ಆಧಾರ್’‌ ಸಂಖ್ಯೆ ಬಹಿರಂಗಪಡಿಸಲು ಇಷ್ಟವಿಲ್ಲವೇ…? ಇಗೋ ಬಂದಿದೆ ವರ್ಚುವಲ್ ಐಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ‘ಆಧಾರ್’‌ ಸಂಖ್ಯೆ ಬಹಿರಂಗಪಡಿಸಲು ಇಷ್ಟವಿಲ್ಲವೇ…? ಇಗೋ ಬಂದಿದೆ ವರ್ಚುವಲ್ ಐಡಿ

ಆಧಾರ್‌ ಸಂಖ್ಯೆ ಬಹಿರಂಗಗೊಳಿಸಲು ಇಚ್ಛಿಸದ ಪ್ರಜೆಗಳಿಗೆ ವರ್ಚುವಲ್ ಗುರುತನ್ನು ಕೊಡಮಾಡಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ನಿಮ್ಮ ಆಧಾರ್‌ ಸಂಖ್ಯೆಯೊಂದಿಗೆ ನೋಂದಣಿಗೊಂಡ ಮೊಬೈಲ್ ಸಂಖ್ಯೆ ಮೂಲಕ ನಿಮ್ಮ ವಿಐಡಿಯನ್ನು ಜನರೇಟ್ ಮಾಡಬಹುದಾಗಿದೆ ಎಂದು ಪ್ರಾಧಿಕಾರ ಟ್ವೀಟ್ ಮಾಡಿದೆ.

ಏನಿದು ವರ್ಚುವಲ್ ಐಡಿ…?

ಏಪ್ರಿಲ್ 2018ರಲ್ಲಿ ಪರಿಚಯಿಸಲಾದ ಈ ಕಾನ್ಸೆಪ್ಟ್‌ ಅಡಿ, ಆಧಾರ್‌ ಕಾರ್ಡ್‌ದಾರರು ಸಿಮ್ ಖಾತ್ರಿ ಸೇರಿದಂತೆ ಹಲವಾರು ಉದ್ದೇಶಗಳಿಗೆ, 12 ಅಂಕಿಯ ಬಯೋಮೆಟ್ರಿಕ್ ಐಡಿಯ ಬದಲಿಗೆ ವರ್ಚುವಲ್ ಐಡಿ ಜನರೇಟ್ ಮಾಡಿಕೊಳ್ಳಬಹುದಾಗಿದೆ. ಪ್ರಜೆಗಳ ವೈಯಕ್ತಿಕ ಹಾಗೂ ಭೌಗೋಳಿಕ ಮಾಹಿತಿಗಳನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲೆಂದು ಈ ಹೆಜ್ಜೆಯನ್ನು ಯುಐಎಡಿಐ ಮುಂದಾಗಿದೆ.

16 ಅಂಕಿಯ ಈ ವರ್ಚುವಲ್ ಐಡಿಯನ್ನು, ಮೊಬೈಲ್ ಕಂಪನಿಯಂಥ ಏಜೆನ್ಸಿಗಳಿಗೆ ಬಳಕೆದಾರರು ಕೊಡಬಹುದಾಗಿದೆ. ಈ ಮೂಲಕ ಮನೆ ವಿಳಾಸ, ಫೋಟೊಗ್ರಾಫ್, ಹೆಸರು ಸೇರಿದಂತೆ ಸೀಮಿತ ಮಾಹಿತಿಯನ್ನು ಖಾತ್ರಿಪಡಿಸಲು ಕೊಡಬಹುದಾಗಿದೆ. ನಿಮ್ಮ ವರ್ಚುವಲ್ ಐಡಿ ಜನರೇಟ್ ಮಾಡಲು ನೀವು https://www.uidai.gov.in ಜಾಲತಾಣಕ್ಕೆ ಭೇಟಿ ಕೊಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...