ಆಧಾರ್ ಸಂಖ್ಯೆ ಬಹಿರಂಗಗೊಳಿಸಲು ಇಚ್ಛಿಸದ ಪ್ರಜೆಗಳಿಗೆ ವರ್ಚುವಲ್ ಗುರುತನ್ನು ಕೊಡಮಾಡಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ.
ಈ ಉದ್ದೇಶಕ್ಕಾಗಿ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಗೊಂಡ ಮೊಬೈಲ್ ಸಂಖ್ಯೆ ಮೂಲಕ ನಿಮ್ಮ ವಿಐಡಿಯನ್ನು ಜನರೇಟ್ ಮಾಡಬಹುದಾಗಿದೆ ಎಂದು ಪ್ರಾಧಿಕಾರ ಟ್ವೀಟ್ ಮಾಡಿದೆ.
ಏನಿದು ವರ್ಚುವಲ್ ಐಡಿ…?
ಏಪ್ರಿಲ್ 2018ರಲ್ಲಿ ಪರಿಚಯಿಸಲಾದ ಈ ಕಾನ್ಸೆಪ್ಟ್ ಅಡಿ, ಆಧಾರ್ ಕಾರ್ಡ್‌ದಾರರು ಸಿಮ್ ಖಾತ್ರಿ ಸೇರಿದಂತೆ ಹಲವಾರು ಉದ್ದೇಶಗಳಿಗೆ, 12 ಅಂಕಿಯ ಬಯೋಮೆಟ್ರಿಕ್ ಐಡಿಯ ಬದಲಿಗೆ ವರ್ಚುವಲ್ ಐಡಿ ಜನರೇಟ್ ಮಾಡಿಕೊಳ್ಳಬಹುದಾಗಿದೆ. ಪ್ರಜೆಗಳ ವೈಯಕ್ತಿಕ ಹಾಗೂ ಭೌಗೋಳಿಕ ಮಾಹಿತಿಗಳನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲೆಂದು ಈ ಹೆಜ್ಜೆಯನ್ನು ಯುಐಎಡಿಐ ಮುಂದಾಗಿದೆ.
16 ಅಂಕಿಯ ಈ ವರ್ಚುವಲ್ ಐಡಿಯನ್ನು, ಮೊಬೈಲ್ ಕಂಪನಿಯಂಥ ಏಜೆನ್ಸಿಗಳಿಗೆ ಬಳಕೆದಾರರು ಕೊಡಬಹುದಾಗಿದೆ. ಈ ಮೂಲಕ ಮನೆ ವಿಳಾಸ, ಫೋಟೊಗ್ರಾಫ್, ಹೆಸರು ಸೇರಿದಂತೆ ಸೀಮಿತ ಮಾಹಿತಿಯನ್ನು ಖಾತ್ರಿಪಡಿಸಲು ಕೊಡಬಹುದಾಗಿದೆ. ನಿಮ್ಮ ವರ್ಚುವಲ್ ಐಡಿ ಜನರೇಟ್ ಮಾಡಲು ನೀವು https://www.uidai.gov.in ಜಾಲತಾಣಕ್ಕೆ ಭೇಟಿ ಕೊಡಬಹುದಾಗಿದೆ.