ಕತ್ತೆ ಹಾಲಿಗೂ ಹೆಚ್ಚಿನ ಬೇಡಿಕೆಯಿದೆ. ದೇಶದಲ್ಲಿ ಎಮ್ಮೆ, ದನದ ಹಾಲಿನ ಡೈರಿ ಇದೆ. ಆದ್ರೆ ಕತ್ತೆ ಹಾಲಿನ ಡೈರಿ ಇರಲಿಲ್ಲ. ಶೀಘ್ರವೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿ ಶುರುವಾಗ್ತಿದೆ.
ದೇಶದಲ್ಲಿ ಮೊದಲ ಬಾರಿಗೆ ಕತ್ತೆ ಹಾಲು ಮಾರಾಟವಾಗಲಿದೆ. ಒಂದು ಲೀಟರ್ ಹಾಲಿಗೆ 7000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಕತ್ತೆ ಹಾಲಿನ ಈ ಡೈರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕತ್ತೆ ಹಾಲು ಮನುಷ್ಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಸೌಂದರ್ಯ ಉತ್ಪನ್ನಗಳ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ.
ಎನ್‌ಆರ್‌ಸಿಇ, ಹಿಸಾರ್ ನಲ್ಲಿ ಹಾಲಿನ ಡೈರಿ ಶುರು ಮಾಡಲಿದೆ. ಎನ್‌ಆರ್‌ಸಿಇ ಈಗಾಗಲೇ 10 ಹಲಾರಿ ತಳಿ ಕತ್ತೆಗಳನ್ನು ಖರೀದಿಸಿದೆ. ಇದ್ರ ಹಾಲನ್ನು ಕ್ಯಾನ್ಸರ್, ಬೊಜ್ಜು, ಅಲರ್ಜಿಯಂತಹ ರೋಗಗಳಿಗೆ ಔಷಧಿ ರೂಪದಲ್ಲಿ ಬಳಸಲಾಗುತ್ತದೆ.