ಹೊಸ ನೋಟುಗಳು ಬಂದಂತೆ ಹಳೆ ನೋಟುಗಳ ಚಾಲ್ತಿ ಕಡಿಮೆಯಾಗುತ್ತದೆ. ಆದ್ರೆ ಕೆಲವರ ಮನೆಯಲ್ಲಿ ಇನ್ನೂ ಹಳೆ ಕಾಲದ ನೋಟುಗಳಿರುತ್ತವೆ. ನಿಮ್ಮ ಬಳಿಯೂ ಹಳೆಯ 100 ರೂಪಾಯಿ ನೋಟಿದ್ದರೆ 50 ಸಾವಿರ ರೂಪಾಯಿ ಗಳಿಸಲು ಅವಕಾಶವಿದೆ.
ಈ ನೋಟನ್ನು ನೀವು ಆನ್ಲೈನ್ ಮೂಲಕ ಮಾರಾಟ ಮಾಡಬೇಕು. ಈ ನೋಟುಗಳನ್ನು ಇಂಡಿಯಾ ಮಾರ್ಟ್, ಶಾಪ್ಕ್ಲೂಸ್ ನಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್ನಲ್ಲಿ ಈ 100 ರೂಪಾಯಿ ನೋಟಿನ ಮೌಲ್ಯ 50 ಸಾವಿರ ರೂಪಾಯಿಗಳವರೆಗೆ ಇದೆ. ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೋಟು, 19ನೇ ಶತಮಾನದ್ದಾಗಿರಬೇಕು. ಕ್ರಮ ಸಂಖ್ಯೆ, 6ಸಿ * 989013 ಮತ್ತು ಐಟಂ ಕೋಡ್ – 161439066 ಆಗಿರಬೇಕು.
ಅಗ್ಗದ ದರಕ್ಕೆ ಐ ಫೋನ್ ಖರೀದಿಸಲು ಹೋಗಿ ಎಡವಟ್ಟು ಮಾಡಿಕೊಂಡ ಯುವಕ..!
ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಕೆಲ ನೋಟುಗಳು ಚಾಲ್ತಿಯಲ್ಲಿದ್ದವು. ಆದ್ರೆ ಅನೇಕರು ಈ ನೋಟುಗಳನ್ನು ನೋಡಿಲ್ಲ. ಒಂದು ವೇಳೆ ಆಗಿನ ಕಾಲದ ನೋಟುಗಳು ನಿಮ್ಮಲ್ಲಿದ್ದರೆ ಅದರಿಂದಲೂ ನೀವು ಹಣ ಗಳಿಸಬಹುದು.
ನಿಮ್ಮ ಬಳಿ ಮಾತಾ ವೈಷ್ಣೋ ದೇವಿಯ 5 ಮತ್ತು 10 ರೂಪಾಯಿ ನಾಣ್ಯಗಳಿದ್ದರೆ ಅದನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಈ ನಾಣ್ಯಗಳನ್ನು 2002 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಮಾತಾ ವೈಷ್ಣೋ ದೇವಿಯನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಈ ನಾಣ್ಯ ಹೊಂದಿರುವವರು ಅದೃಷ್ಟವಂತರು ಎಂದು ನಂಬಲಾಗಿದೆ. ಆದ್ದರಿಂದ ಜನರು ಇಂತಹ ನಾಣ್ಯಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಿದ್ದಾರೆ. ಈ ನಾಣ್ಯಗಳನ್ನು ಕೂಡ ಆನ್ಲೈನ್ ನಲ್ಲಿ ಮಾರಾಟ ಮಾಡಬೇಕಾಗುತ್ತದೆ.