ಕೊರೊನಾ ಕಾಲದಲ್ಲಿ ಇಂಟರ್ನೆಟ್ನ ಬಳಕೆ ಅತಿಯಾಗಿದೆ. ಇದೇ ವೇಳೆಯಲ್ಲಿ ಆನ್ಲೈನ್ ಫ್ರಾಡ್ ಕೂಡ ಹೆಚ್ಚಾಗಿದೆ. ಹ್ಯಾಕರ್ಸ್ ಗೂಗಲ್ನ ಸಹಾಯದಿಂದ ಅನೇಕ ಮಂದಿಯನ್ನ ಸೈಬರ್ ಕ್ರೈಂ ಬಲಿಪಶುಗಳನ್ನಾಗಿ ಮಾಡ್ತಿದ್ದಾರೆ. ನೀವು ಗೂಗಲ್ನಲ್ಲಿ ಸರ್ಚ್ ಮಾಡುವ ಕೆಲ ವಿಚಾರಗಳು ಮುಂದೊಂದು ದಿನ ನಮ್ಮನ್ನ ಭಾರೀ ದೊಡ್ಡ ಸಂಕಷ್ಟಕ್ಕೀಡುಮಾಡಬಹುದು. ಇಂತಹ ಕೆಲ ಗೂಗಲ್ ಸರ್ಚ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕೊರೊನಾ ಕಾಲದಿಂದಾಗಿ ಆನ್ಲೈನ್ ಬ್ಯಾಂಕಿಂಗ್ ಹಾಗೂ ವ್ಯವಹಾರ ಮೊದಲಿಗಿಂತ ಹೆಚ್ಚಾಗಿದೆ . ಇದರಿಂದ ಲಾಭ ಅನೇಕ ಇದೆ. ಆದರೆ ಲಾಭದ ಜೊತೆಯಲ್ಲಿ ಅಪಾಯವೂ ಕಾದಿದೆ ಎಂಬುದನ್ನ ನೀವು ಮರೆಯೋ ಹಾಗಿಲ್ಲ. ಆನ್ಲೈನ್ ಫ್ರಾಡ್ ಮಾಡುವ ಹ್ಯಾಕರ್ಸ್ ಬ್ಯಾಂಕ್ ರೀತಿಯಲ್ಲೇ ಯುಆರ್ಎಲ್ ಮಾಡುತ್ತಾರೆ. ಇದಾದ ಬಳಿಕ ನಾವು ಯಾವಾಗ ಬ್ಯಾಂಕ್ನ ಹೆಸರನ್ನ ಹಾಕುತ್ತೆವೇಯೋ ಆಗೆಲ್ಲ ಹ್ಯಾಕರ್ಸ್ನ ಗಾಳಕ್ಕೆ ಸಿಲುಕುತ್ತೇವೆ. ಈ ಮೂಲಕ ನಮ್ಮ ಖಾತೆಯಿಂದ ಹಣವನ್ನ ದೇಪೋದು ಅವರಿಗೆ ತುಂಬಾನೇ ಸುಲಭದ ಕೆಲಸವಾಗಿ ಬಿಡುತ್ತೆ. ಹೀಗಾಗಿ ಗೂಗಲ್ನಲ್ಲಿ ಎಂದಿಗೂ ಬ್ಯಾಂಕ್ ವ್ಯವಹಾರ ಮಾಡಲೇಬೇಡಿ. ಬ್ಯಾಂಕ್ಗಳ ಅಧಿಕೃತ ವೆಬ್ಸೈಟ್ ಹಾಗೂ ಅಪ್ಲಿಕೇಶನ್ಗಳ ಮೂಲಕವೇ ನಿಮ್ಮ ವ್ಯವಹಾರಗಳನ್ನ ನಡೆಸಿ.
ನಾವು ಯಾವುದೇ ಸಹಾಯವಾಣಿಗಳ ಸಂಖ್ಯೆ ಬೇಕು ಅಂದರೆ ಸಾಕು ಗೂಗಲ್ನಲ್ಲಿ ಸರ್ಚ್ ಮಾಡುತ್ತೇವೆ. ಈ ಕಾರಣದಿಂದಲೇ ಅನೇಕರು ಸೈಬರ್ ಕ್ರೈಂಗೆ ಗುರಿಯಾಗಿದ್ದಾರೆ. ಹ್ಯಾಕರ್ಸ್ ಕಂಪನಿಯ ನಕಲಿ ವೆಬ್ಸೈಟ್ಗಳನ್ನ ತಯಾರಿಸಿ ಸುಳ್ಳು ಸಹಾಯವಾಣಿ ಸಂಖ್ಯೆಯನ್ನ ಗೂಗಲ್ನಲ್ಲಿ ಹರಿಬಿಟ್ಟಿರ್ತಾರೆ. ಹೀಗಾಗಿ ಎಂದಿಗೂ ಗೂಗಲ್ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನ ಹುಡುಕಲು ಹೋಗಬೇಡಿ. ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕವೇ ಸಹಾಯವಾಣಿ ಸಂಖ್ಯೆಯನ್ನ ಪಡೆಯಿರಿ .
ಬಹುತೇಕ ಎಲ್ಲಾ ಮಂದಿ ಗೂಗಲ್ನ್ನು ವೈದ್ಯನಂತೆ ಪರಿಗಣಿಸ್ತಾರೆ. ಯಾವುದೇ ರೋಗ ಕಾಣಿಸಿಕೊಳ್ತು ಅಂದರೂ ಸಹ ಅನೇಕರು ಗೂಗಲ್ನಲ್ಲಿ ಸರ್ಚ್ ಮಾಡೋಕೆ ಶುರು ಮಾಡ್ತಾರೆ, ಆದರೆ ನೀವು ಈ ರೀತಿಯ ಕೆಲಸ ಮಾಡೋದ್ರಿಂದ ಭಾರೀ ದೊಡ್ಡ ಸಂಕಷ್ಟಕ್ಕೆ ಸಿಲುಕಲಿದ್ದೀರಿ. ರೋಗದ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳೋದು ತಪ್ಪಲ್ಲ. ಆದರೆ ಗೂಗಲ್ನಿಂದ ಸಹಾಯ ಪಡೆದು ತೆಗೆದುಕೊಳ್ಳುವ ಚಿಕಿತ್ಸೆ ಹಾಗೂ ಔಷಧಿಗಳು ಜೀವಕ್ಕೆ ಕಂಟಕವಾಗಿ ಪರಿಣಮಿಸಿದ ಸಾಕಷ್ಟು ಉದಾಹರಣೆಗಳಿವೆ.
ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾವನ್ನ ಉತ್ತೇಜಿಸುವ ಸಲುವಾಗಿ ಅನೇಕ ಯೋಜನೆಗಳ ಬಗೆಗಿನ ಮಾಹಿತಿಯನ್ನ ಇಂಟರ್ನೆಟ್ನಲ್ಲಿ ಹರಿಬಿಡ್ತಾರೆ. ಈ ಎಲ್ಲಾ ಯೋಜನೆಗಳಿಗೆ ಕೇಂದ್ರ ಸರ್ಕಾರದ್ದೇ ಅಧಿಕೃತ ವೆಬ್ಸೈಟ್ಗಳು ಇರುತ್ತವೆ. ಈ ವೆಬ್ಸೈಟ್ ಮೂಲಕ ನೀವು ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಆದರೆ ಕೆಲ ಹ್ಯಾಕರ್ಸ್ ಸರ್ಕಾರದ ವೆಬ್ಸೈಟ್ಗಳಿಗೇ ಹೋಲುವಂತಹ ನಕಲಿ ವೆಬ್ಸೈಟ್ಗಳನ್ನ ಸೃಷ್ಟಿ ಮಾಡಿರ್ತಾರೆ . ಹೀಗಾಗಿ ಇವುಗಳಿಂದ ಎಚ್ಚರ ವಹಿಸೋದು ತುಂಬಾನೇ ಅಗತ್ಯ.