alex Certify DL, ಇನ್ಸೂರೆನ್ಸ್, ವಾಹನ ದಾಖಲೆ ಕುರಿತಾಗಿ ಸರ್ಕಾರದಿಂದ ಮತ್ತೊಂದು ಭರ್ಜರಿ ‘ಸಿಹಿ ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

DL, ಇನ್ಸೂರೆನ್ಸ್, ವಾಹನ ದಾಖಲೆ ಕುರಿತಾಗಿ ಸರ್ಕಾರದಿಂದ ಮತ್ತೊಂದು ಭರ್ಜರಿ ‘ಸಿಹಿ ಸುದ್ದಿ’

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಲಾಗಿದ್ದು ಮೇ 17 ರವರೆಗೂ ಲಾಕ್ಡೌನ್ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಚಾಲನಾ ಪರವಾನಿಗೆ(ಡಿಎಲ್) ಸೇರಿದಂತೆ ಎಲ್ಲ ವಾಹನ ದಾಖಲೆಗಳು ಜೂನ್ 30ರವರೆಗೆ ಮಾನ್ಯವಾಗಿರುತ್ತವೆ.

ಫೆಬ್ರವರಿ 1 ರಿಂದ ಜೂನ್ 30ರ ನಡುವೆ ಅವಧಿ ಮುಕ್ತಾಯವಾಗಿರುವ ವಾಹನ ದಾಖಲೆಗಳು ಜೂನ್ 30ರವರೆಗೆ ಮಾನ್ಯವಾಗಿರುತ್ತವೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾಹಿತಿ ನೀಡಿದ್ದು, ವಾಹನ ಪರವಾನಿಗೆ, ನೋಂದಣಿ ಪ್ರಮಾಣಪತ್ರ, ಪರ್ಮಿಟ್, ಡಿಎಲ್ ಸೇರಿದಂತೆ ಎಲ್ಲಾ ರೀತಿಯ ವಾಹನ ದಾಖಲೆಗಳಿಗೆ ಅನ್ವಯವಾಗುವಂತೆ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಕಾಗದಪತ್ರಗಳ ನವೀಕರಣ ಇಲ್ಲದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ. ಅವಧಿ ಮುಕ್ತಾಯಗೊಂಡ ಕಾಗದಪತ್ರಗಳ ಮಾನ್ಯತೆಯನ್ನು ಮೇ 31ರವರೆಗೆ ವಿಸ್ತರಿಸಿದ್ದು ಅದನ್ನು ಪರಿಷ್ಕರಿಸಿ ಜೂನ್ 30ರವರೆಗೆ ಮಾನ್ಯ ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...