ನೀವೇನಾದರೂ ಮುಂಬೈ ಹಾಗೂ ಪುಣೆಗೆ ಹೋಗಿ ಅಲ್ಲಿ ಒಂದಷ್ಟು ಅಡ್ಡಾಡಿ ಬಂದಿದ್ದರೆ ಚಿಟಾಲೆ ಬ್ರಾಂಡ್ ಬಗ್ಗೆ ಕೇಳಿರುತ್ತೀರಿ. ತನ್ನ ಶ್ರೀಕಂದ್, ಮೊಸರು ಹಾಗೂ ಇತರೆ ಕ್ಷೀರೋತ್ಪನ್ನಗಳಿಂದಾಗಿ ಫೇಮಸ್ ಆಗಿರುವ ಚಿಟಾಲೆ ಸ್ಥಳೀಯರ ಪ್ರೀತಿಯ ಬ್ರಾಂಡ್ ಆಗಿದೆ.
ಆದರೆ ಈ ಜನಪ್ರಿಯ ಬ್ರಾಂಡ್ ಬಗ್ಗೆ ಇರುವ ಒಂದು ಇಂಟೆರೆಸ್ಟಿಂಗ್ ಕಥೆ ಗೊತ್ತೇ…? ಈ ಯಶಸ್ವೀ ಉದ್ಯಮ ಸ್ಥಾಪಿಸಲು 1918ರಲ್ಲಿ ಭಾರತದಲ್ಲಿ ಸಾಂಕ್ರಮಿಕವೊಂದು ಪ್ರೇರಣೆಯಂತೆ…! ಅಚ್ಚರಿಗೊಳಿಸುವ ಈ ವಿಷಯವನ್ನು ಖುದ್ದು ಚಿಟಾಲೆ ಬ್ರಾಂಡ್‌ನ ಸ್ಥಾಪಕ ಭಾಸ್ಕರ್ ಗಣೇಶ್ ಚಿಟಾಲೆಯ ಮರಿ ಮೊಮ್ಮಗ ಇಂದ್ರನೀಲ್ ಚಿಟಾಲೆ ತಿಳಿಸಿದ್ದಾರೆ.
ಸತಾರಾ ಬಳಿಕ ಲಿಂಬ್ಗೋವ್ ಗ್ರಾಮದ ಜಮೀನುದಾರ ಕುಟುಂಬವೊಂದರಿಂದ ಬಂದ ಭಾಸ್ಕರ್ ಗಣೇಶ್ ಚಿಟಾಲೆ 1918ರಲ್ಲಿ ತಮ್ಮ ತಂದೆ ವೈರಲ್ ಸಾಂಕ್ರಮಿಕವೊಂದರಿಂದ ಮೃತಪಟ್ಟ ಬಳಿಕ ತಮ್ಮ ತಾಯಿಯನ್ನು ನೋಡಿಕೊಳ್ಳಲು ಊರು ಬಿಟ್ಟರು. ತಮ್ಮೂರಿನ ಹೊಲಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ ಚಿಟಾಲೆ ಜೀವನ ಸಾಗಿಸಲು ಸಹ ಕಷ್ಟಪಡುತ್ತಿದ್ದರು.
ಜಪಾನ್‌ನಲ್ಲಿ ಕೋವಿಡ್-ಪ್ರೂಫ್ ʼಥಿಯೇಟರ್ʼ ಆರಂಭ…!
ಈ ವೇಳೆ ಕ್ಷೀರೋತ್ಪಾದನೆಯಲ್ಲಿ ಯಶಸ್ವಿ ಉದ್ಯಮ ಮಾಡಬಹುದು ಎಂದು ಅರಿತ ಚಿಟಾಲೆ, 1039ರಲ್ಲಿ ಭಿಲ್ವಾಡಿ ಗ್ರಾಮಕ್ಕೆ ತೆರಳಿ ತಮ್ಮ ಕ್ಷೀರ ಉದ್ಯಮ ಸ್ಥಾಪಿಸಿದರು. ಕೆಲವು ಡಜನ್ ಎಮ್ಮೆಗಳೊಂದಿಗೆ ತಮ್ಮ ಉದ್ಯಮ ಆರಂಭಿಸಿದ ಚಿಟಾಲೆ, ಅಲ್ಲಿಂದ ಮುಂಬೈಗೆ ಇದ್ದ ರೈಲು ಸಂಪರ್ಕ ಬಳಸಿಕೊಂಡು ಹಾಲು ಪೂರೈಸಲು ನಿರ್ಧರಿಸಿದರು. ಆ ದಿನಗಳಲ್ಲಿ ಕರೆದ ಹಾಲನ್ನು ಅಂದಂದೇ ಸೇವಿಸಿಬಿಡಬೇಕಿತ್ತು.
ಸೂರತ್‌ನಲ್ಲಿ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಪುತ್ರ ರಘುನಾಥ್‌ರನ್ನು ಕರೆಯಿಸಿಕೊಂಡ ಚಿಟಾಲೆ ಮುಂಬೈಯಲ್ಲಿ ಕ್ಷೀರ ಪೂರೈಕೆಯ ಉದ್ಯಮ ನೋಡಿಕೊಳ್ಳಲು ನೇಮಿಸಿದರು. ಹೀಗೆ ಚಿಟಾಲೆ ಡೈರಿ ಮುಂಬೈಯಲ್ಲಿ ನಿಧಾನವಾಗಿ ನೆಲೆಯೂರಲು ಆರಂಭಿಸಿತು. ಇಂದು ಚಿಟಾಲೆ ಹೆಸರಿನಲ್ಲಿ ಡೈರಿ ಹಾಗೂ ಸಿಹಿ ತಿನಿಸುಗಳ ಉದ್ಯಮ ಯಶಸ್ವಿಯಾಗಿ ನಡೆಯುತ್ತಿದೆ.