ನವದೆಹಲಿ: ಅಗತ್ಯ ವಸ್ತುಗಳ ಬೆಲೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ 6 ವಾರದ ಅವಧಿಯಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೆಳೆ ದರ ಶೇಕಡ 15 ರಷ್ಟು ಹೆಚ್ಚಳವಾಗಿದೆ.
ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯ ಕಾರಣ ತೊಗರಿ ಮತ್ತು ಉದ್ದು ಬೆಳೆಯುವ ಪ್ರದೇಶಗಳು ಜಲಾವೃತಗೊಂಡು ಬೆಳೆ ಹಾನಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿ ಬಿತ್ತನೆಯ ಪ್ರಮಾಣ ಶೇಕಡ 4.6 ರಷ್ಟು ಕಡಿಮೆಯಾಗಿದೆ. ಇದರಿಂದ ದರ ಇನ್ನೂ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಲಾತೂರಿನ ಗುಣಮಟ್ಟದ ತೊಗರಿ ಬೇಳೆ ದರ ಆರು ವಾರದಲ್ಲಿ ಪ್ರತಿ ಕೆಜಿಗೆ 97 ರೂ.ನಿಂದ 115 ರೂ. ಹೆಚ್ಚಳವಾಗಿದೆ. ಉದ್ದಿನ ಬೇಳೆ ದರ ಕೂಡ ಏರಿಕೆ ಕಂಡಿದೆ.