alex Certify ಕೊರೊನಾ ಎಫೆಕ್ಟ್: ರಸ್ತೆ ಬದಿಯ ಸ್ಟಾಲ್‌ನಲ್ಲಿ ಬಿರಿಯಾನಿ ಮಾರುತ್ತಿದ್ದಾರೆ ಸ್ಟಾರ್‌ ಶೆಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎಫೆಕ್ಟ್: ರಸ್ತೆ ಬದಿಯ ಸ್ಟಾಲ್‌ನಲ್ಲಿ ಬಿರಿಯಾನಿ ಮಾರುತ್ತಿದ್ದಾರೆ ಸ್ಟಾರ್‌ ಶೆಫ್

2020 ಬಹಳ ಅನಿಶ್ಚಿತತೆಗಳ ವರ್ಷವಾಗಿದೆ. ಯಾವಾಗ, ಯಾರಿಗೆ, ಹೇಗೆ ಏನೆಲ್ಲಾ ಆಗುತ್ತಿವೆ ಎಂದು ಅಂದಾಜಿಸುವುದೇ ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಕೋವಿಡ್-19 ಸಾಂಕ್ರಮಿಕ ಜಗತ್ತಿನಲ್ಲಿರುವ ಸಿದ್ಧ ಸೂತ್ರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿದೆ.

ಪಂಚತಾರಾ ಹೊಟೆಲುಗಳು ಹಾಗೂ ಕ್ರೂಸ್‌ಗಳಲ್ಲಿ ಕೆಲಸ ಮಾಡಿ ಅನುಭವವಿರುವ ಅಕ್ಷಯ್ ಪಾರ್ಕರ್‌ ಹೆಸರಿನ ಈ ಪ್ರಖ್ಯಾತ ಶೆಫ್‌ ಕೊರೋನಾ ವೈರಸ್ ಕಾರಣದಿಂದ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈ ಹಿನ್ನಡೆಗೆ ಎದೆಗುಂದದ ಪಾರ್ಕರ್‌, ರಸ್ತೆ ಬದಿಯೊಂದರಲ್ಲಿ ತಮ್ಮದೇ ಸ್ಟಾಲ್ ತೆರೆದು ಬಿರಿಯಾನಿ ಮಾರಲು ಆರಂಭಿಸಿದ್ದಾರೆ.

ಮುಂಬಯಿಯ ನಿವಾಸಿಯಾದ ಪಾರ್ಕರ್‌ರ ಈ ಹೊಸ ನಡೆಯ ಬಗ್ಗೆ ಬೀಯಿಂಗ್ ಮಲ್ವಾನಿ ಹೆಸರಿನ ಫೇಸ್ಬುಕ್ ಪೇಜ್‌ ಒಂದು ತನ್ನ ವಾಲ್‌ನಲ್ಲಿ ಪೋಸ್ಟ್ ಮಾಡಿದೆ. ತಾಜ್ ಫ್ಲೈಟ್ ಸರ್ವೀಸ್ ಹಾಗೂ ಯುವರಾಣಿಯರ ಕ್ರೂಸ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಪಾರ್ಕರ್‌ ಇದೀಗ ತಮ್ಮದೇ ಸ್ವಂತ ವಹಿವಾಟು ಆರಂಭಿಸಿದ್ದಾರೆ ಎಂದು ಈ ಪೇಜ್ ತಿಳಿಸಿದೆ.

ಅಕ್ಷಯ್‌ರ ಈ ಹೊಸ ಪ್ರಯಾಣಕ್ಕೆ ನೆಟ್ಟಿಗ ಸಮುದಾಯ ಆಲ್ ದಿ ಬೆಸ್ಟ್ ತಿಳಿಸಿದ್ದು, ಆವರ ಈ ನಡೆ ಇನ್ನಷ್ಟು ಯಶಸ್ಸು ತರಲಿ ಎಂದು ಹಾರೈಸಿದ್ದಾರೆ.

आयुष्य तुम्हाला एक संधी देते आता त्या संधीचे कसे सोन्यात रुपांतर करायचे हे तुमच्यावर असते ह्या लॉकडाऊन च्या आधी मुंबईतील…

Posted by Being मालवणी on Tuesday, November 17, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...