2020 ಬಹಳ ಅನಿಶ್ಚಿತತೆಗಳ ವರ್ಷವಾಗಿದೆ. ಯಾವಾಗ, ಯಾರಿಗೆ, ಹೇಗೆ ಏನೆಲ್ಲಾ ಆಗುತ್ತಿವೆ ಎಂದು ಅಂದಾಜಿಸುವುದೇ ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಕೋವಿಡ್-19 ಸಾಂಕ್ರಮಿಕ ಜಗತ್ತಿನಲ್ಲಿರುವ ಸಿದ್ಧ ಸೂತ್ರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿದೆ.
ಪಂಚತಾರಾ ಹೊಟೆಲುಗಳು ಹಾಗೂ ಕ್ರೂಸ್‌ಗಳಲ್ಲಿ ಕೆಲಸ ಮಾಡಿ ಅನುಭವವಿರುವ ಅಕ್ಷಯ್ ಪಾರ್ಕರ್ ಹೆಸರಿನ ಈ ಪ್ರಖ್ಯಾತ ಶೆಫ್ ಕೊರೋನಾ ವೈರಸ್ ಕಾರಣದಿಂದ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈ ಹಿನ್ನಡೆಗೆ ಎದೆಗುಂದದ ಪಾರ್ಕರ್, ರಸ್ತೆ ಬದಿಯೊಂದರಲ್ಲಿ ತಮ್ಮದೇ ಸ್ಟಾಲ್ ತೆರೆದು ಬಿರಿಯಾನಿ ಮಾರಲು ಆರಂಭಿಸಿದ್ದಾರೆ.
ಮುಂಬಯಿಯ ನಿವಾಸಿಯಾದ ಪಾರ್ಕರ್‌ರ ಈ ಹೊಸ ನಡೆಯ ಬಗ್ಗೆ ಬೀಯಿಂಗ್ ಮಲ್ವಾನಿ ಹೆಸರಿನ ಫೇಸ್ಬುಕ್ ಪೇಜ್ ಒಂದು ತನ್ನ ವಾಲ್‌ನಲ್ಲಿ ಪೋಸ್ಟ್ ಮಾಡಿದೆ. ತಾಜ್ ಫ್ಲೈಟ್ ಸರ್ವೀಸ್ ಹಾಗೂ ಯುವರಾಣಿಯರ ಕ್ರೂಸ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಪಾರ್ಕರ್ ಇದೀಗ ತಮ್ಮದೇ ಸ್ವಂತ ವಹಿವಾಟು ಆರಂಭಿಸಿದ್ದಾರೆ ಎಂದು ಈ ಪೇಜ್ ತಿಳಿಸಿದೆ.
ಅಕ್ಷಯ್‌ರ ಈ ಹೊಸ ಪ್ರಯಾಣಕ್ಕೆ ನೆಟ್ಟಿಗ ಸಮುದಾಯ ಆಲ್ ದಿ ಬೆಸ್ಟ್ ತಿಳಿಸಿದ್ದು, ಆವರ ಈ ನಡೆ ಇನ್ನಷ್ಟು ಯಶಸ್ಸು ತರಲಿ ಎಂದು ಹಾರೈಸಿದ್ದಾರೆ.
https://www.facebook.com/Beingmalwani/posts/3685014704896955