alex Certify ವಿದೇಶದಿಂದ ಭಾರತಕ್ಕೆ ಬರುವವರು ಖರ್ಚು ಮಾಡ್ಬೇಕು ಇಷ್ಟು ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಿಂದ ಭಾರತಕ್ಕೆ ಬರುವವರು ಖರ್ಚು ಮಾಡ್ಬೇಕು ಇಷ್ಟು ಹಣ

ಕೊರೊನಾ ವೈರಸ್ ಕಾರಣ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿ ಇಂದಿಗೆ 43 ದಿನ ಕಳೆದಿದೆ. ಲಾಕ್ ಡೌನ್ ಕಾರಣ ವಿದೇಶದಲ್ಲಿ ಅನೇಕ ಭಾರತೀಯರು ಸಿಕ್ಕಿಬಿದ್ದಿದ್ದಾರೆ. ಅವರನ್ನು ತವರಿಗೆ ತರಲು ಮೋದಿ ಸರ್ಕಾರ ಗುರುವಾರದಿಂದ ‘ವಂದೇ ಭಾರತ್ ಮಿಷನ್’ ಪ್ರಾರಂಭಿಸುತ್ತಿದೆ. ಇದರ ಅಡಿಯಲ್ಲಿ ಸುಮಾರು 15,000 ಭಾರತೀಯರನ್ನು ಅನೇಕ ಹಂತಗಳಲ್ಲಿ ವಿದೇಶದಿಂದ ಕರೆತರಲಾಗ್ತಿದೆ. ಅವ್ರು ಸ್ವಂತ ಖರ್ಚಿನಲ್ಲಿ ಭಾರತಕ್ಕೆ ಬರಬೇಕು. ಅವ್ರ ಪ್ರಯಾಣದ ಖರ್ಚನ್ನು ಸರ್ಕಾರ ಭರಿಸುತ್ತಿಲ್ಲ.

ವಿದೇಶದಿಂದ ಭಾರತೀಯರನ್ನು ಮರಳಿ ತರಲು ಮೇ 7 ರಿಂದ ಮೇ 13 ರವರೆಗೆ ವಿಶೇಷ ವಿಮಾನ ಪ್ರಯಾಣ ಬೆಳೆಸಲಿದೆ. ಇದು ಯುಎಇಗೆ 10, ಯುಎಸ್ ಮತ್ತು ಯುಕೆಗೆ 7-7, ಸೌದಿ ಅರೇಬಿಯಾಕ್ಕೆ 5, ಸಿಂಗಾಪುರಕ್ಕೆ 5 ಮತ್ತು ಕತಾರ್‌ ಗೆ 2 ವಿಮಾನಗಳನ್ನು ಕಳುಹಿಸಲಾಗ್ತಿದೆ.

ಯುಕೆ ಮತ್ತು ಯುಎಸ್ ನಿಂದ ದೆಹಲಿಗೆ ಬರಲು 50,000 ರಿಂದ 1 ಲಕ್ಷ ರೂಪಾಯಿಗಳ ಖರ್ಚು ಬರಲಿದೆ. ಬಾಂಗ್ಲಾದೇಶದಿಂದ ದೆಹಲಿಗೆ ಬರುವ ವೇಳೆ 12,000 ರೂಪಾಯಿ ಪಾವತಿಸಬೇಕು. ಸಿಂಗಾಪುರದಿಂದ ದೆಹಲಿ ಮತ್ತು ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರು 20 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾದರೆ, ಸಿಂಗಾಪುರದಿಂದ ಬೆಂಗಳೂರಿಗೆ ಬರುವವರು 18 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...