alex Certify ʼವಿಮೆʼ ಪಾಲಿಸಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಮೆʼ ಪಾಲಿಸಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ನವದೆಹಲಿ: ಆರೋಗ್ಯ ವಿಮೆ ಕಂತು ಸಂಗ್ರಹಕ್ಕೆ ಭಾರತೀಯ ವಿಮಾ ಪ್ರಾಧಿಕಾರ ಅನುಮತಿ ನೀಡಿದೆ. ಕೊರೋನಾ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದ ಕಾರಣ ವಿಮೆದಾರರ ಆರೋಗ್ಯ ವಿಮೆ ಪ್ರೀಮಿಯಂಗಳನ್ನು ಕಂತಿನಲ್ಲಿ ಸಂಗ್ರಹಿಸಲು ವಿಮೆ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಮಾಣಿಕರಣ ಆಧಾರದ ಮೇಲೆ ವೈಯಕ್ತಿಕ ಆರೋಗ್ಯ ವಿಮೆ ಪ್ರಾಡಕ್ಟ್ ಗಳಲ್ಲಿ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಸೇರಿಸಲು ಒಪ್ಪಿಗೆ ನೀಡಿತ್ತು.

ಪ್ರಸ್ತುತ ಕೋರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ವಿಮೆ ಕಂತು ಪಾವತಿ ಸರಳಗೊಳಿಸಲು ಕ್ರಮಕೈಗೊಂಡಿದೆ. ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಪ್ರೀಮಿಯಂ ಪಾವತಿಯಲ್ಲಿ ಕಂತು ಸಂಗ್ರಹಿಸಲು ಒಪ್ಪಿಗೆ ಸೂಚಿಸಲಾಗಿದೆ. ಯಾವುದೇ ನಿರ್ದಿಷ್ಟ ಪಾಲಿಸಿಗಳಿಗೆ ಸೂಕ್ತವೆಂದು ಪರಿಗಣಿಸಬಹುದಾದ ವಿಮಾ ಕಂತುಗಳನ್ನು ಸಂಗ್ರಹಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...