alex Certify ಇಲ್ನೋಡಿ..! ಬಾಟಲ್ ನೀರಿಗಿಂತಲೂ ಕಡಿಮೆಯಾಯ್ತು ಕಚ್ಚಾತೈಲದ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ನೋಡಿ..! ಬಾಟಲ್ ನೀರಿಗಿಂತಲೂ ಕಡಿಮೆಯಾಯ್ತು ಕಚ್ಚಾತೈಲದ ದರ

ಕೋರೋನಾ ಹೊಡೆತಕ್ಕೆ ಆರ್ಥಿಕತೆ ತಲ್ಲಣಿಸಿದ್ದು, ಅನೇಕ ಕ್ಷೇತ್ರಗಳು ತತ್ತರಿಸಿ ಹೋಗಿವೆ. ಅಮೆರಿಕದಲ್ಲಿ ಕಚ್ಚಾತೈಲದ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬಾಟಲ್ ನೀರಿಗಿಂತಲೂ ಕಡಿಮೆಯಾಗಿದೆ.

ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 10.82 ಡಾಲರ್ ಗೆ ಕುಸಿದಿದೆ. ಕಚ್ಚಾತೈಲದ ದರ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇತಿಹಾಸದಲ್ಲಿ ಇದೇ ಮೊದಲ ಸಲ ಎಂದು ಹೇಳಲಾಗಿದೆ.

ಕಚ್ಚಾತೈಲವನ್ನು ರಫ್ತುಮಾಡುವ ರಾಷ್ಟ್ರಗಳ ಒಕ್ಕೂಟವಾಗಿರುವ ಒಪೆಕ್ ಮತ್ತು ಅದರ ಮಿತ್ರ ರಾಷ್ಟ್ರಗಳ ನಡುವೆ ಇತ್ತೀಚೆಗೆ ಉತ್ಪಾದನೆ ಕಡಿತಗೊಳಿಸುವ ಒಪ್ಪಂದವಾಗಿತ್ತು. ಹೀಗಿದ್ದರೂ ಕೂಡ ಕಚ್ಚಾತೈಲದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.

ವಿಶ್ವದಲ್ಲಿಯೇ ಬೇಡಿಕೆ ಕುಸಿತವಾಗಿ ಪೂರೈಕೆ ಹೆಚ್ಚಳವಾಗಿದೆ. ತೈಲ ಸಂಗ್ರಹಗಾರಗಳು ಭರ್ತಿಯಾಗಿರುವುದರಿಂದ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. 1991ರ ಗಲ್ಫ್ ಯುದ್ಧದ ನಂತರ ಅಮೆರಿಕ ಇಂತಹ ದೊಡ್ಡ ಕುಸಿತ ಅನುಭವಿಸಿದೆ. ಕಚ್ಚಾತೈಲದ ಬೆಲೆ ಬ್ಯಾರೆಲ್ ಗೆ ಒಂದು ಡಾಲರ್ ಗಿಂತಲೂ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...