alex Certify ಕೊರೊನಾ ಕಾರಣಕ್ಕೆ ಬದಲಾಯ್ತು ಮೆನು ಕಾರ್ಡ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾರಣಕ್ಕೆ ಬದಲಾಯ್ತು ಮೆನು ಕಾರ್ಡ್….!

ಲಾಕ್ ಡೌನ್ ಸಡಿಲಿಕೆ ಬಳಿಕ ವಿಶ್ವಾದ್ಯಂತ ರೆಸ್ಟೋರೆಂಟುಗಳು ಕಾರ್ಯಾರಂಭ ಮಾಡಿವೆ. ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೊಸ ಹೊಸ ಪ್ರಯೋಗಗಳನ್ನು ಅವು ಮಾಡುತ್ತಿವೆ.

ಮೆನು ಕಾರ್ಡ್ ನಿಂದ ಆಗುವ ಅಪಾಯ ತಪ್ಪಿಸಲು ಇಟಲಿಯ ರೆಸ್ಟೋರೆಂಟ್ ಹೊಸ ಪ್ರಯೋಗ ಮಾಡಿ ವಿಶ್ವದ ದೃಷ್ಟಿ ಹರಿಯುವಂತೆ ಮಾಡಿದೆ.

ಸಾಮಾನ್ಯವಾಗಿ ಹೋಟೆಲ್ ಮೆನು ದೊಡ್ಡ ಪಟ್ಟಿಯಲ್ಲಿ ಇರುತ್ತದೆ, ಗ್ರಾಹಕರನ್ನು ಸೆಳೆಯಲು ಹೋಟೆಲ್ ಮೆನು ಕಾರ್ಡ್ ಕೊಡದೇ ಹೋದರೆ ಹೇಗೆ ಸಾಧ್ಯ? ಹಾಗೆ ನಿತ್ಯ ನೂರಾರು ಮಂದಿ ಕೈಯಾಡಿಸುವ ವೈರಸ್ ಹರಡಲು ಕಾರಣವಾಗಬಹುದಾದ ಮೆನು ಕಾರ್ಡ್ ಇಲ್ಲದೆ ಹೋಟೆಲ್ ತಿಂಡಿತಿನಿಸು ಮಾಹಿತಿಯನ್ನು ಗ್ರಾಹಕರು ತಿಳಿದುಕೊಳ್ಳುವುದಾದರೂ ಹೇಗೆ?

ಇಟಲಿಯ ಈ ಹೋಟೆಲ್, ಗ್ರಾಹಕರ ಹಿತದೃಷ್ಟಿಯಿಂದ ಕ್ಯೂಆರ್ ಕೋಡ್ ಆಧಾರಿತ ಮೆನುಗಳನ್ನು ವಿವರಿಸುವ ಪದ್ಧತಿಯನ್ನು ಜಾರಿ ಮಾಡಿದೆ. ರೆಸ್ಟೋರೆಂಟ್ ಗೆ ಬರುವ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅಲ್ಲಿನ ಮೆನು ಕಾಣಿಸಲಿದೆ.

ಆರಂಭದಲ್ಲಿ ಗ್ರಾಹಕರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ಭಯಪಟ್ಟರು. ಆದರೆ ಈಗ ಸಲೀಸಾಗಿ ಎಲ್ಲರೂ ಬಳಸುತ್ತಿದ್ದಾರೆ ಎಂದು ಹೊಟೇಲ್ ನ ಮಾಲೀಕರಾದ ಮರಿಯ ಚಿಯಾರ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...