alex Certify ದೇಶದ ಜನತೆಗೆ ಲಸಿಕೆ ಬಗ್ಗೆ ಭರ್ಜರಿ ಸುದ್ದಿ: ಅತಿ ಕಡಿಮೆ ಬೆಲೆಯ ಲಸಿಕೆಯೂ ಶೀಘ್ರದಲ್ಲೇ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಲಸಿಕೆ ಬಗ್ಗೆ ಭರ್ಜರಿ ಸುದ್ದಿ: ಅತಿ ಕಡಿಮೆ ಬೆಲೆಯ ಲಸಿಕೆಯೂ ಶೀಘ್ರದಲ್ಲೇ ಲಭ್ಯ

ನವದೆಹಲಿ: ಸೆಪ್ಟೆಂಬರ್ ವೇಳೆಗೆ ಭಾರತದ ಜನರಿಗೆ ಅಗ್ಗದ ವ್ಯಾಕ್ಸಿನ್ ಲಭ್ಯವಾಗಲಿದೆ. ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆಗಿಂತ ಅಗ್ಗದ ದರದಲ್ಲಿ ಲಸಿಕೆ ಸಿಗಲಿದೆ.

ಹೈದರಾಬಾದ್ ನ ಬಯೋಲಜಿಕಲ್ ಇ ಕಂಪನಿಯ ಕಾರ್ಬ್ ವ್ಯಾಕ್ಸ್ ಲಸಿಕೆ 2 ಡೋಸ್ 400 ರೂ ಗಿಂತ ಕಡಿಮೆ ದರದಲ್ಲಿ ಸಿಗಲಿದೆ. ಲಸಿಕೆಯ 1 ಡೋಸ್ ಗೆ 200 ರೂಪಾಯಿಗಿಂತ ಕಡಿಮೆ ದರ ಇರಲಿದೆ.

ಸದ್ಯ ಕೋವಿಶೀಲ್ಡ್ ಒಂದು ಡೋಸ್ ಕನಿಷ್ಠ ದರ 300 ರೂಪಾಯಿ ಇದೆ. ಕೊವ್ಯಾಕ್ಸಿನ್ 1 ಡೋಸ್ ಗೆ 400 ರೂಪಾಯಿ ಇದೆ. ರಾಜ್ಯ ಸರ್ಕಾರಗಳಿಗೆ ಒಂದು ಡೋಸ್ ಗೆ 400 ರೂ. ನಿಗದಿ ಮಾಡಲಾಗಿದೆ. ಸ್ಪುಟ್ನಿಕ್ ಲಸಿಕೆ 1 ಡೋಸ್ ಗೆ 995 ರೂಪಾಯಿ ದರ ಇದೆ. ಫೈಜರ್ ಲಸಿಕೆ ಬಂದರೂ 1 ಡೋಸ್ ಗೆ 1 ಸಾವಿರ ರೂ.ಗಿಂತ ಹೆಚ್ಚಿನ ದರ ಇರಲಿದೆ.

ಹೀಗಾಗಿ ಕಾರ್ಬ್ ವ್ಯಾಕ್ಸ್ ಲಸಿಕೆಯೇ ಅಗ್ಗದ ಲಸಿಕೆಯಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ 1500 ಕೋಟಿ ರೂಪಾಯಿ ಮುಂಗಡ ನೀಡಿ ಕಾರ್ಬ್ ವ್ಯಾಕ್ಸ್ ಲಸಿಕೆ ಪಡೆಯಲು ಖರೀದಿ ಒಪ್ಪಂದ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...