alex Certify ಮೇ 17ರ ನಂತ್ರ ಹಾರಾಡಲಿದೆ ಕೆಲ ವಿಮಾನ: 2 ಗಂಟೆ ಪ್ರಯಾಣದಲ್ಲಿ ಸಿಗಲ್ಲ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 17ರ ನಂತ್ರ ಹಾರಾಡಲಿದೆ ಕೆಲ ವಿಮಾನ: 2 ಗಂಟೆ ಪ್ರಯಾಣದಲ್ಲಿ ಸಿಗಲ್ಲ ಆಹಾರ

ರೈಲ್ವೆ ಇಲಾಖೆ ನಂತ್ರ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟದ ಬಗ್ಗೆ ಚಿಂತನೆ ನಡೆಸಿವೆ.

ಮೇ 17ರಂದು ಲಾಕ್ ಡೌನ್ ಮೂರನೇ ಹಂತ ಮುಗಿಯಲಿದ್ದು, ಇದಾದ ನಂತ್ರ ಕೆಲ ವಿಮಾನಗಳು ಹಾರಾಟ ನಡೆಸಲಿವೆ ಎನ್ನಲಾಗ್ತಿದೆ. ಲಾಕ್ ಡೌನ್ ನಂತ್ರ ವಿಮಾನ ಹಾರಾಟದ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ.

ಕಡಿಮೆ ಅಂತರದ ಪ್ರಯಾಣದಲ್ಲಿ ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಆಹಾರ ನೀಡುವುದಿಲ್ಲ. ಹಾಗೆ ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಾಗಲಿದೆ. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಸೋಮವಾರ ಪ್ರಮುಖ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಅಂತಿಮ ಸಿದ್ಧತೆಗಳನ್ನು ಗಮನಿಸಲಿದ್ದಾರೆ.

ಎರಡು ಗಂಟೆಗಿಂತ ಕಡಿಮೆ ಪ್ರಯಾಣದಲ್ಲಿ ಪ್ರಯಾಣಿಕರಿಗೆ ವಿಮಾನದಲ್ಲಿ ಯಾವುದೇ ಆಹಾರ ಲಭ್ಯವಾಗುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಲಿದೆ. ವಿಮಾನದಂತೆ ರೈಲ್ವೆಯ ಎಲ್ಲ ಪ್ರಯಾಣಿಕರಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಿಲ್ಲ. ರೈಲ್ವ ಪ್ರಯಾಣಿಕರ ಬಳಿ ಸ್ಮಾರ್ಟ್ಫೋನ್ ಇರದ ಕಾರಣ ಅಪ್ಲಿಕೇಷನ್ ಕಡ್ಡಾಯ ಮಾಡಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...