ಕೊರೊನಾ ಮಧ್ಯೆ ಒಂದಾದ ಮೇಲೆ ಒಂದು ವಸ್ತುವಿನ ಬೆಲೆ ಹೆಚ್ಚಾಗ್ತಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ತಾಮ್ರದ ಬೆಲೆ ಪ್ರತಿ ಕೆಜಿಗೆ 638.50 ರೂಪಾಯಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಾಟರ್ ಮೋಟರ್, ಮನೆಯ ಎಲೆಕ್ಟ್ರಿಕ್ ಫಿಟ್ಟಿಂಗ್, ಕೂಲರ್, ಮಿಕ್ಸರ್ ಗ್ರೈಂಡರ್, ಎಸಿ ಮುಂತಾದ ಸರಕುಗಳ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ತಾಮ್ರ ಸ್ಕ್ರ್ಯಾಪ್ ಮೇಲಿನ ಆಮದು ಸುಂಕವನ್ನು ಶೇಕಡಾ 2.5 ರಿಂದ ಶೇಕಡಾ 2.5 ಕ್ಕೆ ಇಳಿಸಿತ್ತು. ಇದು ತಾಮ್ರದ ಬೆಲೆ ಕಡಿಮೆಯಾಗಲು ನೆರವಾಗಲಿದೆ ಎಂದು ಭಾವಿಸಲಾಗಿತ್ತು. ಕೊರೊನಾ ಮಧ್ಯೆಯೇ ಪ್ರಪಂಚದಾದ್ಯಂತದ ಆರ್ಥಿಕತೆಗಳು ಚೇತರಿಸಿಕೊಳ್ಳುತ್ತಿವೆ. ಕೈಗಾರಿಕಾ ಉತ್ಪಾದನೆ ವೇಗ ಪಡೆಯುತ್ತಿದೆ. ಕೈಗಾರಿಕೆಗಳಲ್ಲಿ ತಾಮ್ರವನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್ 19 ಕುರಿತ ಮತ್ತೊಂದು ಶಾಕಿಂಗ್ ಸಂಗತಿ
ಆದ್ದರಿಂದ ಇದರ ಬೇಡಿಕೆ ಹೆಚ್ಚುತ್ತಿದೆ. ಇದಕ್ಕಾಗಿಯೇ ತಾಮ್ರದ ಬೆಲೆಗಳು ದಾಖಲೆಯ ಮಟ್ಟವನ್ನು ತಲುಪುತ್ತಿವೆ. ವಿದ್ಯುತ್ ಕೇಬಲ್‌ಗಳು, ಫ್ಯಾನ್‌ಗಳು, ಕೂಲರ್‌ಗಳು, ಎಸಿಗಳಂತಹ ಹೆಚ್ಚಿನ ವಿದ್ಯುತ್ ವಸ್ತುಗಳಲ್ಲಿ ತಾಮ್ರವನ್ನು ಬಳಸಲಾಗುತ್ತದೆ. ತಾಮ್ರದ ಬೆಲೆ ಹೆಚ್ಚಳದಿಂದಾಗಿ ಈ ಎಲ್ಲಾ ವಸ್ತುಗಳು ದುಬಾರಿಯಾಗುತ್ತವೆ.
ಎಂಸಿಎಕ್ಸ್‌ನಲ್ಲಿ ತಾಮ್ರದ ಬೆಲೆ 2020 ರ ಮಾರ್ಚ್‌ನಲ್ಲಿ ಪ್ರತಿ ಕೆಜಿಗೆ 335 ರೂಪಾಯಿಯಾಗಿತ್ತು. ಇದು ಡಿಸೆಂಬರ್ 31, 2020 ರಂದು 594.15 ರೂಪಾಯಿಯಾಗಿತ್ತು.