alex Certify ಕಿರಾಣಿ ಅಂಗಡಿಗಳ ಕುರಿತ ಕುತೂಹಲಕಾರಿ ಮಾಹಿತಿ ಸಮೀಕ್ಷೆಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರಾಣಿ ಅಂಗಡಿಗಳ ಕುರಿತ ಕುತೂಹಲಕಾರಿ ಮಾಹಿತಿ ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾ ವೈರಸ್ ಮೊದಲು ಕಿರಾಣಿ ಅಂಗಡಿಗಳ ಬದಲು ಮಾಲ್, ಸೂಪರ್ ಮಾರ್ಕೆಟ್ ಹಾಗೂ ಆನ್ಲೈನ್ ನಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡ್ತಿದ್ದರು. ಕೊರೊನಾ ವೈರಸ್ ದೇಶದ ಚಿತ್ರಣ ಬದಲಿಸಿದೆ. ದೇಶದಲ್ಲಿ ಈಗ ಪಕ್ಕದ ಕಿರಾಣಿ ಅಂಗಡಿಗಳಲ್ಲಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಡೆಲಾಯ್ಟ್ ಗ್ಲೋಬಲ್ ಸ್ಟೇಟ್ ಆಫ್ ದಿ ಕನ್ಸ್ಯೂಮರ್ಸ್ ಟ್ರ್ಯಾಕರ್ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಕಳೆದ ಆರು ವಾರಗಳಲ್ಲಿ ಗ್ರಾಹಕರ ಖರ್ಚಿನ ವಿಧಾನದಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯಲ್ಲಿ 1,000 ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಶೇಕಡಾ 55 ರಷ್ಟು ಜನರು ದಿನಸಿ ಅಥವಾ ದಿನಸಿಗಾಗಿ ಹೆಚ್ಚು ಖರ್ಚು ಮಾಡಲು ಬಯಸುವುದಾಗಿ ಹೇಳಿದ್ದಾರೆ. ಶೇಕಡಾ 52 ರಷ್ಟು ಜನರು ದೈನಂದಿನ ಬಳಕೆಯ ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುವುದಾಗಿ ಹೇಳಿದ್ದಾರೆ.

ಶೇಕಡಾ 72 ರಷ್ಟು ಜನರು ಸ್ಥಳೀಯ ಕಿರಾಣಿ ಅಂಗಡಿಯಿಂದ ಸರಕುಗಳನ್ನು ಖರೀದಿಸಲು ಬಯಸುವುದಾಗಿ ಹೇಳಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕಿರಾಣಿ ಅಂಗಡಿಗಳ ಬಗ್ಗೆ ಜನರಲ್ಲಿ  ವಿಶ್ವಾಸ ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...