ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಹೀಗಾಗಿ ನೀವು ಮಾರ್ಚ್ 31ರೊಳಗಾಗಿ ಕೆಲ ಮುಖ್ಯ ಕೆಲಸಗಳನ್ನ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದೆ ನಿಮಗೆ ಬಹಳ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದು ಮಾತ್ರವಲ್ಲದೇ ಹೊಸ ಆರ್ಥಿಕ ವರ್ಷದಿಂದ ಕೆಲ ಬದಲಾವಣೆಗಳೂ ಆಗೋದ್ರಿಂದ ಪಿಎನ್ಬಿ, ಪಿಎಂ ಕಿಸಾನ್ ಹಾಗೂ ವಿವಾದ್ ಸೇ ವಿಶ್ವಾಸ್ ಸ್ಕೀಮ್ನಡಿಯಲ್ಲಿ ಮುಖ್ಯ ಕಾರ್ಯಗಳನ್ನ ಮಾಡಿಕೊಳ್ಳಲೇಬೇಕು.
1. ವಿವಾದ್ ಸೇ ವಿಶ್ವಾಸ್ ಸ್ಕೀಮ್ನ ಕೊನೆಯ ಅವಧಿ 31 ಮಾರ್ಚ್ : ಕೇಂದ್ರ ಸರ್ಕಾರ ವಿವಾದದಿಂದ ವಿಶ್ವಾಸ್ ಸ್ಕೀಮ್ನಡಿಯಲ್ಲಿ ಹಣ ಪಾವತಿಯ ಕೊನೆಯ ದಿನಾಂಕ 31 ಮಾರ್ಚ್ ಆಗಿದೆ. ಈ ಸ್ಕೀಮ್ನ ಅಡಿಯಲ್ಲಿ ಸರ್ಕಾರ ತೆರಿಗೆ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನ ಪಡುತ್ತಿದೆ.
2. ಪಿಎನ್ಬಿಯಿಂದಲೂ ಗ್ರಾಹಕರಿಗೆ ಅಲರ್ಟ್ ಸಂದೇಶ : ಪಿಎನ್ಯಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮರ್ಜರ್ನ ಬಳಿಕ ಮಾರ್ಚ್ 31ರಿಂದ ಹಳೆಯ ಐಎಫ್ಎಸ್ಸಿ ಕೋಡ್ ಕೆಲಸ ಮಾಡೋದಿಲ್ಲ . ಇದರ ಜೊತೆಯಲ್ಲಿ ಒಬಿಸಿ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತುತ ಇರುವ ಚೆಕ್ಬುಕ್ ಕೂಡ ಕೇವಲ ಮಾರ್ಚ್ 31ರವರೆಗೆ ಮಾತ್ರ ಕೆಲಸ ಮಾಡಲಿದೆ. ಏಪ್ರಿಲ್ 1ರಿಂದ ಬ್ಯಾಂಕ್ನಿಂದ ಹೊಸ ಚೆಕ್ಬುಕ್ಗಳನ್ನ ಪಡೆಯಬೇಕು ಎಂದು ಗ್ರಾಹಕರಿಗೆ ಸಂದೇಶ ರವಾನಿಸಲಾಗಿದೆ.
3. ಕಿಸಾನ್ ಕ್ರೆಡಿಟ್ ಕಾರ್ಡ್: ಕೇಂದ್ರ ಸರ್ಕಾರ ಕೆಸಿಸಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನ ಅಭಿವೃದ್ಧಿ ಮಾಡಲಿಕ್ಕೋಸ್ಕರ ಅಭಿಯಾನಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ನ್ನು ಮಾಡಿಸುತ್ತಿದೆ. ನೀವು ಕೂಡ ಸ್ಕೀಮ್ನ ಲಾಭವನ್ನ ಪಡೆಯಲು ಇಚ್ಚಿಸುತ್ತೀರಾ ಅಂದ್ರೆ ಬ್ಯಾಂಕ್ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ತುಂಬಿದ 15 ದಿನಗಳ ಬಳಿಕ ಕಿಸಾನ್ ಕಾರ್ಡ್ ನಿಮ್ಮ ಕೈ ಸೇರಲಿದೆ.
4.ಕಡಿಮೆ ಬಡ್ಡಿದರದಲ್ಲಿ ಸಿಗಲಿದೆ ಗೃಹ ಸಾಲ ಸೌಲಭ್ಯ : ದೇಶದಲ್ಲಿ ಬಹುತೇಕ ಬ್ಯಾಂಕ್ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಸೌಲಭ್ಯ ನೀಡುತ್ತಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ಮಾರ್ಚ್ 31ರವರೆಗೆ ಮಾತ್ರ ಈ ಆಫರ್ ಇದೆ. ಮಾರ್ಚ್ 31ರ ಒಳಗಾಗಿ ಸಾಲ ಸೌಲಭ್ಯ ಪಡೆದವರಿಗೆ 6.65 ಶೇಕಡಾ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಇದರ ಜೊತೆಯಲ್ಲಿ ಹೆಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ ಬ್ಯಾಂಕ್ ಕೂಡ ಗೃಹ ಸಾಲ ಸೌಲಭ್ಯ ನೀಡಿದೆ.
5. ಎಫ್ಡಿಯಲ್ಲಿ ಹಿರಿಯ ನಾಗರಿಕರಿಗೆ ಸಿಗಲಿದೆ ಹೆಚ್ಚಿನ ಲಾಭ : ಬ್ಯಾಂಕ್ ಆಯ್ದ ಮೆಚ್ಯೂರಿಟಿ ಪಿರೀಯಡ್ ಸ್ಕೀಮ್ನಡಿಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ನೀಡಲಿದೆ. ಗ್ರಾಹಕರಿಗೆ 0.5 ಶೇಕಡಾ ಹೆಚ್ಚಿನ ಬಡ್ಡಿ ಸಿಗಲಿದೆ. ಇದಕ್ಕೂ ಕೂಡ ಡೆಡ್ಲೈನ್ ಮಾರ್ಚ್ 31 ಆಗಿದೆ. ಎಸ್ಬಿಐ, ಹೆಚ್ಡಿಎಫ್ಸಿ, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಈ ಆಫರ್ ಸಿಗುತ್ತಿದೆ.
6. ಜಿಎಸ್ಟಿ ರಿಟರ್ನ್ ಫೈಲಿಂಗ್ : ಸರ್ಕಾರ 2019-20ನೇ ಆರ್ಥಿಕ ವರ್ಷದಲ್ಲಿ ಜಿಎಸ್ಟಿ ರಿಟರ್ನ್ ದಾಖಲು ಮಾಡಲು ಮಾರ್ಚ್ 31ರವರೆಗೆ ಅವಕಾಶ ನೀಡಿದೆ. ಹೀಗಾಗಿ ಮಾರ್ಚ್ 31ರೊಳಗಾಗಿ ಜಿಎಸ್ಟಿ ರಿಟರ್ನ್ ಪೂರ್ತಿ ಮಾಡಿಕೊಳ್ಳಿ.