ಭಾರತದ ಸಿಪ್ಲಾ ಔಷಧಿ ತಯಾರಕ ಕಂಪನಿ ಕೊರೊನಾ ಲಸಿಕೆ ರೆಮಿಡಿಸಿವರ್ನ ತಯಾರಿಕೆಯನ್ನ ದ್ವಿಗುಣಗೊಳಿಸಿದೆ. ಕೊರೊನಾ ಎರಡನೇ ಅಲೆಯಿಂದಾಗಿ ದೇಶ ತತ್ತರಿಸಿದ್ದು ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನ ಕೈಗೊಂಡಿದೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ನ್ನು ಹಿಂದಿಕ್ಕಿರುವ ಭಾರತ, ಅಮೆರಿಕವನ್ನ ಹೊರತುಪಡಿಸಿದ್ರೆ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನ ಹೊಂದಿದೆ. ಒಟ್ಟು 1.4 ಬಿಲಿಯನ್ ಜನಸಂಖ್ಯೆಯಲ್ಲಿ ಈವರೆಗೆ 107 ಮಿಲಿಯನ್ ಮಂದಿ ಲಸಿಕೆಯನ್ನ ಸ್ವೀಕರಿಸಿದ್ದಾರೆ.
ದೇಶದಲ್ಲಿ ಲಸಿಕೆ ಅಭಾವ ಕಂಡು ಬರ್ತಿರುವ ಹಿನ್ನೆಲೆಯಲ್ಲಿ ರೆಮಿಡಿಸಿವರ್ ಹಾಗೂ ಅದಕ್ಕೆ ಬೇಕಾದ ಔಷಧೀಯ ಪದಾರ್ಥಗಳನ್ನ ರಫ್ತು ಮಾಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ದೇಶದಲ್ಲಿ ಕೊರೊನಾ ಭೀತಿ ಹೆಚ್ಚಾಗಿರೋದ್ರಿಂದ ನಾವು ರೆಮಿಡಿಸಿವರ್ ಉತ್ಪಾದನೆಯನ್ನ ದ್ವಿಗುಣಗೊಳಿಸಿದ್ದೇವೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಲಸಿಕೆ ಬೇಡಿಕೆಯನ್ನ ಗಮನದಲ್ಲಿ ಇಟ್ಟುಕೊಂಡು ನಾವು ಉತ್ಫಾದನೆ ಮಾಡುತ್ತಿದ್ದೇವೆ ಎಂದು ಸಿಪ್ಲಾ ಹೇಳಿಕೆ ನೀಡಿದೆ.