ಕೊರೊನಾ ಎರಡನೇ ವಿರುದ್ಧ ನಡೆಯುತ್ತಿರುವ ದೇಶದ ಹೋರಾಟಕ್ಕೆ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಾದ ಒಪ್ಪೊ ಹಾಗೂ ವಿವೋ ಸಾಥ್ ನೀಡಿವೆ. ದೇಶದಲ್ಲಿ ಉಂಟಾಗಿರುವ ಕೃತಕ ಆಮ್ಲಜನಕ ಕೊರತೆಯನ್ನ ನೀಗಿಸಲು ಸಹಾಯ ಮಾಡಿವೆ.
ದೇಶದಲ್ಲಿ ಆಮ್ಲಜನಕ ಕೊರತೆಯನ್ನ ಗಮನದಲ್ಲಿಟ್ಟುಕೊಂಡು ವಿವೋ ಇಂಡಿಯಾ 2 ಕೋಟಿ ರೂಪಾಯಿ ಹಣವನ್ನ ದೇಣಿಗೆಯ ರೂಪದಲ್ಲಿ ನೀಡಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ವಿವೋ ಇಂಡಿಯಾ ನಿರ್ದೇಶಕ ನಿಪುಣ್ ಮರ್ಯಾ, ಈ ಹೋರಾಟದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಭಾರತದ ಹೋರಾಟಕ್ಕೆ ವಿವೋ ಕೂಡ ಸಾಥ್ ನೀಡಿದೆ ಎಂದು ಹೇಳಿದ್ರು.
ಕಳೆದ ವರ್ಷ ಕೇಂದ್ರ ಸರ್ಕಾರದ ಏಜೆನ್ಸಿಗಳಿಗೆ ವಿವೋ 9 ಲಕ್ಷ ಮಾಸ್ಕ್, 15000 ಪಿಪಿಇ ಕಿಟ್ ಹಾಗೂ 50 ಸಾವಿರ ಲೀಟರ್ ಸ್ಯಾನಿಟೈಸರ್ಗಳನ್ನ ದೇಣಿಗೆ ರೂಪದಲ್ಲಿ ನೀಡಿತ್ತು.
ಇದ್ದಕ್ಕಿದ್ದಂತೆ ಮನೆ ಗೋಡೆ ಮೇಲೆ ಮೂಡಿದ ಬಳಪದ ಕಲೆ..! ಚಿಂತಾಕ್ರಾಂತರಾದ ನಿವಾಸಿಗಳು
ಇನ್ನು ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಸಾಥ್ ನೀಡುವ ಸಲುವಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಒಪ್ಪೋ ಇಂಡಿಯಾ 4.3 ಕೋಟಿ ರೂಪಾಯಿ ಮೌಲ್ಯದ 1000 ಆಕ್ಸಿಜನಲ್ ಹಾಗೂ 500 ಬ್ರೀದಿಂಗ್ ಮಷಿನ್ಗಳನ್ನ ನೀಡೋದಾಗಿ ಹೇಳಿದೆ.
ಇಷ್ಟು ಮಾತ್ರವಲ್ಲದೇ ಒಪ್ಪೊ ಕಂಪನಿ ದೆಹಲಿ ಪೊಲೀಸರು ಹಾಗೂ ಗ್ರೇಟರ್ ನೋಯ್ಡಾ ಮುಂಚೂಣಿ ಕಾರ್ಯಕರ್ತರಿಗೆ ಒಟ್ಟು 1.5 ಕೋಟಿ ರೂಪಾಯಿ ಮೌಲ್ಯದ ಸ್ಮಾರ್ಟ್ ಬ್ಯಾಂಡ್ಗಳನ್ನ ನೀಡಿದೆ.