alex Certify ಶ್ರಾವಣ ಎಫೆಕ್ಟ್: ಮಾಂಸಾಹಾರದಿಂದ ದೂರ ಉಳಿದ ಜನ; ಮೊಟ್ಟೆ, ಚಿಕನ್ ದರ ಭಾರಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರಾವಣ ಎಫೆಕ್ಟ್: ಮಾಂಸಾಹಾರದಿಂದ ದೂರ ಉಳಿದ ಜನ; ಮೊಟ್ಟೆ, ಚಿಕನ್ ದರ ಭಾರಿ ಇಳಿಕೆ

ಶ್ರಾವಣ ಮಾಸದ ಪರಿಣಾಮ ಮೊಟ್ಟೆ, ಚಿಕನ್ ದರ ಕುಸಿತವಾಗಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವನೆ ಮಾಡದ ಕಾರಣ ಚಿಕನ್ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 220 ರೂ. ನಿಂದ 300 ರೂ. ವರೆಗೂ ಇದ್ದ ಚಿಕನ್ ದರ 160 -180 ರೂ.ಗೆ ಇಳಿಕೆಯಾಗಿದೆ.

ಮೊಟ್ಟೆ ದರ ಕೂಡ ಕಡಿಮೆಯಾಗಿದೆ. 6.50 ರೂ. ವರೆಗೂ ಇದ್ದ ಮೊಟ್ಟೆ ದರ ಶ್ರಾವಣದ ಬಳಿಕ 5 ರೂ.ಗೆ ಇಳಿಕೆಯಾಗಿದೆ. ಚಿಕನ್, ಮೊಟ್ಟೆ ಮಾರಾಟ ಭಾರೀ ಕಡಿಮೆಯಾಗಿದೆ. ಶ್ರಾವಣ ಮಾಸದ ಒಂದು ತಿಂಗಳು ನಂತರ ಗಣಪತಿ ಹಬ್ಬ ಮುಗಿಯುವವರೆಗೆ ಹೆಚ್ಚಿನವರು ಮಾಂಸಹಾರ ಸೇವಿಸುವುದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಮೊಟ್ಟೆ, ಚಿಕನ್ ದರ ಕಡಿಮೆಯಾಗಿದೆ. ಮಾಂಸಾಹಾರಿ ಹೋಟೆಲ್ ಗಳಿಗೂ ಗ್ರಾಹಕರು ಬರುತ್ತಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...