ಶ್ರಾವಣ ಮಾಸದ ಪರಿಣಾಮ ಮೊಟ್ಟೆ, ಚಿಕನ್ ದರ ಕುಸಿತವಾಗಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವನೆ ಮಾಡದ ಕಾರಣ ಚಿಕನ್ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 220 ರೂ. ನಿಂದ 300 ರೂ. ವರೆಗೂ ಇದ್ದ ಚಿಕನ್ ದರ 160 -180 ರೂ.ಗೆ ಇಳಿಕೆಯಾಗಿದೆ.
ಮೊಟ್ಟೆ ದರ ಕೂಡ ಕಡಿಮೆಯಾಗಿದೆ. 6.50 ರೂ. ವರೆಗೂ ಇದ್ದ ಮೊಟ್ಟೆ ದರ ಶ್ರಾವಣದ ಬಳಿಕ 5 ರೂ.ಗೆ ಇಳಿಕೆಯಾಗಿದೆ. ಚಿಕನ್, ಮೊಟ್ಟೆ ಮಾರಾಟ ಭಾರೀ ಕಡಿಮೆಯಾಗಿದೆ. ಶ್ರಾವಣ ಮಾಸದ ಒಂದು ತಿಂಗಳು ನಂತರ ಗಣಪತಿ ಹಬ್ಬ ಮುಗಿಯುವವರೆಗೆ ಹೆಚ್ಚಿನವರು ಮಾಂಸಹಾರ ಸೇವಿಸುವುದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಮೊಟ್ಟೆ, ಚಿಕನ್ ದರ ಕಡಿಮೆಯಾಗಿದೆ. ಮಾಂಸಾಹಾರಿ ಹೋಟೆಲ್ ಗಳಿಗೂ ಗ್ರಾಹಕರು ಬರುತ್ತಿಲ್ಲ ಎಂದು ಹೇಳಲಾಗಿದೆ.