ನವದೆಹಲಿ: ಇಂದಿನಿಂದ ಹೊಸ ಆರ್ಥಿಕ ವರ್ಷ ಶುರುವಾಗಿದ್ದು, ಏನೇನು ಬದಲಾವಣೆಗಳಾಗಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಇಂದಿನಿಂದ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬೇಕಿದೆ. ಅದೇ ರೀತಿ ವಿಮಾನ ಪ್ರಯಾಣ ದುಬಾರಿಯಾಗಲಿದೆ. ಕಾರ್, ಬೈಕ್, ಟಿವಿ, ಫ್ರಿಜ್, ಎಸಿ ದರದಲ್ಲಿ ಏರಿಕೆಯಾಗಿದೆ.
ಬಜೆಟ್ ಘೋಷಣೆಗಳು ಜಾರಿಯಾಗಲಿದ್ದು, ಎನ್ಪಿಎಸ್ ಶುಲ್ಕದಲ್ಲಿ ಹೆಚ್ಚಳವಾಗಲಿದೆ. 2.5 ಲಕ್ಷ ರೂಪಾಯಿಗಿಂತ ಹೆಚ್ಚು ಇಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ಮೇಲೆ ತೆರಿಗೆ ಹಾಕಲಾಗುವುದು. ವಿಲಿನಗೊಂಡ 7 ಬ್ಯಾಂಕುಗಳ ಚೆಕ್, ಪಾಸ್ಬುಕ್ ಅಮಾನ್ಯವಾಗಲಿದೆ. ಐಎಫ್ಎಸ್ಸಿ ಕೋಡ್ ನಲ್ಲಿಯೂ ಬದಲಾವಣೆಯಾಗಲಿದೆ.
ಏಪ್ರಿಲ್ 1 ರಿಂದ ಡೆಬಿಟ್ ಕ್ರೆಡಿಟ್ ಕಾರ್ಡ್ ಗಳು ಮತ್ತು ಇತರ ವ್ಯಾಲೆಟ್ ಗಳ ಮೂಲಕ ಮೊಬೈಲ್ ಒಟಿಟಿ ಮೊದಲಾದ ಬಿಲ್ ಗಳ ಆಟೋ ಪೇಮೆಂಟ್ ಪಾವತಿಗೆ ಹೆಚ್ಚುವರಿ ದೃಢೀಕರಣ ಕಡ್ಡಾಯಗೊಳಿಸಿ ಜಾರಿಗೆ ತರಲಾಗಿದ್ದ ನಿಯಮವನ್ನು ಸೆಪ್ಟೆಂಬರ್ 30ರ ವರೆಗೆ ಮುಂದೂಡಲಾಗಿದೆ.
ಅದೇ ರೀತಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವ ಅವಧಿಯನ್ನು ಕೂಡ ಕೇಂದ್ರ ಸರ್ಕಾರ ಜೂನ್ 30 ರ ವರೆಗೆ ಮುಂದೂಡಿಕೆ ಮಾಡಿದೆ.
ಕಾರ್ಮಿಕ ಸಂಹಿತೆ ಜಾರಿ ಮಾಡಲು ಅವಧಿಯನ್ನು ಕೂಡ ಮುಂದೂಡಲಾಗಿದೆ. ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿಯಲ್ಲಿ ಬದಲಾವಣೆಯಾಗುವುದು ಸದ್ಯಕ್ಕೆ ನಿಂತಿದ್ದು, ಹೆಚ್ಚಿನ ಮೊತ್ತ ನಿಗದಿಯಲ್ಲಿ ಯಥಾಸ್ಥಿತಿ ಇರಲಿದೆ.