ಗ್ರಾಹಕಿಗೆ ದೋಷಪೂರಿತ ಮೈಕ್ರೋವೇವ್ ನೀಡಿದ ತಪ್ಪಿಗೆ ಅಂಗಡಿಗೆ ಗ್ರಾಹಕ ಸೇವಾ ಕೋರ್ಟ್ ಒಂದು ಹೊಸ ಮೈಕ್ರೋವೇವ್ ಹಾಗೂ 12 ಸಾವಿರ ರೂ. ಕೊಡುವಂತೆ ಆದೇಶ ನೀಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಸೋನಿಯಾ ಭಾಟಿಯಾ ಎಂಬವರು ಡಿಸೆಂಬರ್ 2018ರಲ್ಲಿ 12,990 ರೂಪಾಯಿ ನೀಡಿ ಮೈಕ್ರೋವೇವ್ ಖರೀದಿ ಮಾಡಿದ್ದರು. ಆದರೆ ಮೈಕ್ರೋವೇವ್ ಸರಿಯಾಗಿ ಕಾರ್ಯ ನಿರ್ವಾಹಿಸ್ತಾ ಇರಲಿಲ್ಲ . ಕೂಡಲೇ ಮ್ಯಾನೇಜರ್ನ್ನು ಸಂಪರ್ಕಿಸಿದ ಸೋನಿಯಾ ಮೈಕ್ರೋವೇವ್ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.
ಆದರೆ ದೂರನ್ನ ಸ್ವೀಕರಿಸಿದ ಮೈಕ್ರೋವೇವ್ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಮಹಿಳೆ ಗ್ರಾಹಕ ಸೇವಾ ದಳಕ್ಕೆ ದೂರನ್ನ ಸಲ್ಲಿಸಿದ್ದರು. ದೂರಿನ ಸಂಬಂಧ ವಿಚಾರಣೆ ನಡೆಸಿದ ಗ್ರಾಹಕ ಸೇವಾ ಆಯೋಗ ಸೋನಿಯಾ ನೀಡಿದ ದೂರು ಸತ್ಯವಾಗಿದೆ ಎಂಬುದನ್ನ ಮನಗಂಡಿದೆ. ಹೀಗಾಗಿ ಮೈಕ್ರೋವೇವ್ ಕಂಪನಿಗೆ ಹೊಸ ಮೈಕ್ರೋವೇವ್ ಹಾಗೂ ದಾವೆ ವೆಚ್ಚವಾಗಿ 7 ಸಾವಿರ ರೂ, ಹೆಚ್ಚುವರಿ ಪರಿಹಾರ 5 ಸಾವಿರ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ.