alex Certify BIG NEWS: ದೇಶಾದ್ಯಂತ ರಸಗೊಬ್ಬರ ಬ್ರಾಂಡ್ ಗಳಲ್ಲಿ ಏಕರೂಪತೆ ತರಲು ‘ಭಾರತ್’ ಬ್ರಾಂಡ್’ ‘ಒಂದು ರಾಷ್ಟ್ರ ಒಂದು ರಸಗೊಬ್ಬರ’ ಯೋಜನೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶಾದ್ಯಂತ ರಸಗೊಬ್ಬರ ಬ್ರಾಂಡ್ ಗಳಲ್ಲಿ ಏಕರೂಪತೆ ತರಲು ‘ಭಾರತ್’ ಬ್ರಾಂಡ್’ ‘ಒಂದು ರಾಷ್ಟ್ರ ಒಂದು ರಸಗೊಬ್ಬರ’ ಯೋಜನೆ ಜಾರಿ

ನವದೆಹಲಿ: ದೇಶಾದ್ಯಂತ ರಸಗೊಬ್ಬರ ಬ್ರಾಂಡ್‌ ಗಳಲ್ಲಿ ಏಕರೂಪತೆಯನ್ನು ತರಲು ಸರ್ಕಾರ ಆದೇಶ ಹೊರಡಿಸಿದ್ದು, ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ‘ಭಾರತ್’ ಎಂಬ ಒಂದೇ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುವಂತೆ ನಿರ್ದೇಶಿಸಿದೆ.

ಯೂರಿಯಾ ಅಥವಾ ಡಿ-ಅಮೋನಿಯಂ ಫಾಸ್ಫೇಟ್(ಡಿಎಪಿ) ಅಥವಾ ಮ್ಯೂರಿಯೇಟ್ ಆಫ್ ಓಟಾಶ್(ಎಂಒಪಿ) ಅಥವಾ ಎನ್‌ಪಿಕೆ ಒಳಗೊಂಡಿರುವ ಎಲ್ಲಾ ರಸಗೊಬ್ಬರ ಚೀಲಗಳು ‘ಭಾರತ್ ಯೂರಿಯಾ’, ‘ಭಾರತ್ ಡಿಎಪಿ’, ‘ಭಾರತ್ ಎಂಒಪಿ’ ಮತ್ತು ‘ಭಾರತ್ ಎನ್‌ಪಿಕೆ’ ಎಂಬ ಬ್ರಾಂಡ್ ಹೆಸರನ್ನು ಹೊಂದಿರಬೇಕು. ಸಾರ್ವಜನಿಕ ಅಥವಾ ಖಾಸಗಿ ವಲಯದ ಗೊಬ್ಬರ ಉತ್ಪಾದಿಸುವ ಕಂಪನಿಗಳು ಇದನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.

ಈ ಆದೇಶಕ್ಕೆ ರಸಗೊಬ್ಬರ ಕಂಪನಿಗಳಿಂದ ವಿರೋಧ ವ್ಯಕ್ತವಾಗಿದೆ. ಬ್ರಾಂಡ್ ಮೌಲ್ಯ ಮತ್ತು ಮಾರುಕಟ್ಟೆ ವ್ಯತ್ಯಾಸಕ್ಕೆ ಅಡಚಣೆಯಾಗುತ್ತದೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರವು ವಾರ್ಷಿಕವಾಗಿ ರಸಗೊಬ್ಬರ, ಕಂಪನಿಗಳಿಗೆ ಸಬ್ಸಿಡಿ ನೀಡುವ ಯೋಜನೆಯಾದ ಪ್ರಧಾನ ಮಂತ್ರಿ ಭಾರತೀಯ ಜನುರ್ವರಕ್ ಪರಿಯೋಜನಾ(ಪಿಎಂಬಿಜೆಪಿ) ಯ ಏಕೈಕ ಬ್ರಾಂಡ್ ಹೆಸರು ಮತ್ತು ಲೋಗೋವನ್ನು ಚೀಲಗಳ ಮೇಲೆ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಂಪನಿಯ ಹೆಸರನ್ನು ಒಟ್ಟು ಪ್ಯಾಕೇಜಿಂಗ್‌ನ ಒಂದು ಸಣ್ಣ ಭಾಗದಲ್ಲಿ ನಮೂದಿಸಬಹುದು ಎಂದು ಉದ್ಯಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಸಗೊಬ್ಬರ ಕಂಪನಿಗಳು ಹಳೆಯ ವಿನ್ಯಾಸದ ಚೀಲಗಳನ್ನು ಸೆಪ್ಟೆಂಬರ್ 15 ರಿಂದ ಖರೀದಿಸಲು ಅನುಮತಿಸುವುದಿಲ್ಲ. ಅಕ್ಟೋಬರ್ 2, 2022 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಕಂಪನಿಗಳಿಗೆ ತಮ್ಮ ಹಳೆಯ ಚೀಲಗಳನ್ನು ಹೊರಹಾಕಲು ಡಿಸೆಂಬರ್ 12 ರವರೆಗೆ ಸಮಯ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...