alex Certify ಉದ್ಯೋಗಿಗಳಿಗೆ ಮುಖ್ಯಮಾಹಿತಿ: ಭವಿಷ್ಯನಿಧಿ ಯೋಜನೆ ಠೇವಣಿ ಬಡ್ಡಿದರ 8.15% | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಮುಖ್ಯಮಾಹಿತಿ: ಭವಿಷ್ಯನಿಧಿ ಯೋಜನೆ ಠೇವಣಿ ಬಡ್ಡಿದರ 8.15%

ನವದೆಹಲಿ: 2022-23ರ ಆರ್ಥಿಕ ವರ್ಷಕ್ಕೆ ನೌಕರರ ಭವಿಷ್ಯ ನಿಧಿ ಯೋಜನೆಯಡಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡ 8.15 ರ ದರದಲ್ಲಿ ಸರ್ಕಾರ ಅನುಮೋದಿಸಿದೆ.

ನಿವೃತ್ತಿ ನಿಧಿ ಸಂಸ್ಥೆ EPFO ಮಾರ್ಚ್ 28, 2023 ರಂದು, ತನ್ನ ಆರು ಕೋಟಿಗೂ ಹೆಚ್ಚು ಚಂದಾದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ(EPF) ಠೇವಣಿಗಳ ಮೇಲಿನ ಬಡ್ಡಿ ದರವನ್ನು 2022-23 ಕ್ಕೆ 8.15 ಶೇಕಡಕ್ಕೆ ಹೆಚ್ಚಿಸಿದೆ.

ಸೋಮವಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಇಪಿಎಫ್‌ಒ 2022-23ರ ಇಪಿಎಫ್‌ನಲ್ಲಿ ಶೇಕಡ 8.15 ರ ಬಡ್ಡಿಯನ್ನು ಸದಸ್ಯರ ಖಾತೆಗಳಿಗೆ ಜಮಾ ಮಾಡಲು ಸಲ್ಲಿಸಿದ ತಿಳಿಸಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಇಪಿಎಫ್‌ಒ ಟ್ರಸ್ಟಿಗಳು ಅನುಮೋದಿಸಿದ ಇಪಿಎಫ್ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದ ನಂತರ ಈ ಆದೇಶ ಬಂದಿದೆ.

ಈಗ EPFO ಕ್ಷೇತ್ರ ಕಚೇರಿಗಳು ಬಡ್ಡಿಯನ್ನು ಚಂದಾದಾರರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿವೆ. ಮಾರ್ಚ್ 2022 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) 2021-22 ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2020-21 ರಲ್ಲಿ ಶೇಕಡ 8.5 ರಿಂದ ಶೇಕಡ 8.10 ಕ್ಕೆ ನಾಲ್ಕು ದಶಕಗಳ ಕನಿಷ್ಠಕ್ಕೆ ಇಳಿಸಿತ್ತು. 1977-78ರಲ್ಲಿ ಇಪಿಎಫ್ ಬಡ್ಡಿ ದರ ಶೇ 8ರಷ್ಟಿದ್ದ ನಂತರ ಇದು ಅತ್ಯಂತ ಕಡಿಮೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...