alex Certify ಮನೆ, ಕಟ್ಟಡ ನಿರ್ಮಿಸುವವರಿಗೆ ‘ಶಾಕಿಂಗ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ, ಕಟ್ಟಡ ನಿರ್ಮಿಸುವವರಿಗೆ ‘ಶಾಕಿಂಗ್ ನ್ಯೂಸ್’

ನವದೆಹಲಿ: ಸಿಮೆಂಟ್ ಮತ್ತು ಉಕ್ಕು ದರ ದಿಢೀರ್ ಏರಿಕೆಯಾಗಿದ್ದು, ಕೆಲವು ವಾರಗಳ ಅವಧಿಯಲ್ಲಿ ಉಕ್ಕಿನ ದರ ಶೇಕಡಾ 40 ರಿಂದ 50 ರಷ್ಟು ಏರಿಕೆಯಾಗಿದೆ.

ಸಿಮೆಂಟ್ ಮತ್ತು ಉಕ್ಕು ತಯಾರಕರು ಅಕ್ರಮ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಲಾಕ್ಡೌನ್ ಜಾರಿಯಲ್ಲಿರುವ ವೇಳೆಯಲ್ಲೇ ವಿವಿಧ ರಾಜ್ಯಗಳಲ್ಲಿ ಒಂದು ಬ್ಯಾಗ್ ಸಿಮೆಂಟ್ ದರ 100 ರೂಪಾಯಿಯಿಂದ 250 ರೂಪಾಯಿಯವರೆಗೆ ಏರಿಕೆಯಾಗಿದೆ.

ಪ್ರತಿ ಟನ್ ಉಕ್ಕು ದರ 2000 ರೂಪಾಯಿಯಿಂದ 2500 ರೂಪಾಯಿವರೆಗೂ ಏರಿಕೆಯಾಗಿದೆ. ಲಾಕ್ಡೌನ್ ಜಾರಿಯಾಗಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದು ಸಾಮಗ್ರಿಗಳ ದರ ಏರಿಕೆ ಮಾಡಿದರೆ ನಿರ್ಮಾಣ ವೆಚ್ಚವೂ ಜಾಸ್ತಿಯಾಗಲಿದ್ದು ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ.

ದರ ನಿಯಂತ್ರಣ ಮಾಡಲು ಮಧ್ಯಪ್ರವೇಶಿಸಬೇಕೆಂದು ಕ್ರೆಡಾಯ್ ವತಿಯಿಂದ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...