ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಕ್ಯಾಪ್ ಜೆಮಿನಿ ಸುವರ್ಣಾವಕಾಶ ನೀಡುತ್ತಿದೆ. ಪ್ರಾನ್ಸ್ ಮೂಲದ ಎಂ ಎನ್ ಸಿ ಕಂಪನಿಯಾಗಿರುವ ಕ್ಯಾಪ್ ಜೆಮಿನಿ ಈ ವರ್ಷ ಭಾರತದಲ್ಲಿ ಬರೋಬ್ಬರಿ 30,000 ಜನರಿಗೆ ಉದ್ಯೋಗ ಕಲ್ಪಿಸಲು ನಿರ್ಧರಿಸಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದ ಹಾಗೂ ಹೊಸದಾಗಿ ಉದ್ಯೋಗವನ್ನು ಹುಡುಕುತ್ತಿದ್ದ ಸಾವಿರಾರು ಜನರಿಗೆ ಇದರಿಂದ ಅನುಕೂಲವಾಗಲಿದೆ. ಕ್ಯಾಪ್ ಜೆಮಿನಿಯಲ್ಲಿ ಪ್ರಸಕ್ತ ವರ್ಷದಲ್ಲಿ ಕಳೆದ ವರ್ಷಕ್ಕಿಂತ ಶೇ.25 ಪಟ್ಟು ನೇಮಕಾತಿ ಹೆಚ್ಚಿಸಲಾಗುತ್ತಿದೆ. ಈ ಕಂಪನಿಯಲ್ಲಿ ಬಿಪಿಒ, ಕನ್ಸಲ್ಟೆನ್ಸಿ, ಮುಂತಾದ ಸೇವೆಗಳನ್ನು ನೀಡಲಾಗುತ್ತಿದೆ. 50:50 ಅನಾನುಭವಿ ಹಾಗೂ ಅನುಭವಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕ್ಯಾಪ್ ಜೆಮಿನಿ ಮುಖ್ಯ ಕಾರ್ಯನಿರ್ವಾಹಕ ಅಶ್ವಿನ್ ಯಾರ್ಡಿ ತಿಳಿಸಿದ್ದಾರೆ.
ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ
ಕ್ಯಾಪ್ ಜೆಮಿನಿ ಭಾರತದಲ್ಲಿ ಈಗಾಗಲೇ 125,000 ಜನರಿಗೆ ಉದ್ಯೋಗವನ್ನು ನೀಡಿದ್ದು, ವಿಶ್ವದ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಪನಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ವಿಶೇಷ.