alex Certify ಮನೆಯಲ್ಲೇ ಕುಳಿತು ‘ಹಣ’ ಗಳಿಸಲು ಇಲ್ಲಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ‘ಹಣ’ ಗಳಿಸಲು ಇಲ್ಲಿದೆ ಅವಕಾಶ

ಈಗ ಲಾಕ್‌ ಡೌನ್‌ ಜಾರಿಯಲ್ಲಿದೆ. ಅಲ್ಲದೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಹಲವರು ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅಂತವರು ಮನೆಯಲ್ಲೇ ಕುಳಿತು ಕೈತುಂಬ ಗಳಿಸುವ ಅನೇಕ ಕೆಲಸಗಳಿವೆ.

ಅದಕ್ಕೆ ಹೆಚ್ಚು ಹೂಡಿಕೆ ಮಾಡಬೇಕಾಗಿಯೂ ಇಲ್ಲ. ಯಾವುದಾದ್ರೂ ಕಲೆ ನಿಮಗೆ ಒಲಿದಿದ್ದರೆ ಅದನ್ನು ಬಂಡವಾಳ ಮಾಡಿಕೊಳ್ಳಬಹುದು. ಡಾನ್ಸ್, ಗಿಟಾರ್, ಪೇಟಿಂಗ್, ತಬಲಾ ಹೀಗೆ ನಿಮಗೆ ಬರುವ ಕಲೆಯನ್ನು ಮಕ್ಕಳಿಗೆ ಕಲಿಸಬಹುದು. ಇದಕ್ಕೆ ಹೂಡಿಕೆಯ ಅಗತ್ಯವಿಲ್ಲ.

ಬ್ಲಾಗಿಂಗ್ ಮೂಲಕವೂ ಮನೆಯಲ್ಲೇ ಹಣ ಗಳಿಕೆ ಶುರು ಮಾಡಬಹುದು. ಇದಕ್ಕೆ ಒಂದು ಲ್ಯಾಪ್ ಟಾಪ್ ಹಾಗೂ ಇಂಟರ್ನೆಟ್ ಕನೆಕ್ಷನ್ ಬೇಕಾಗುತ್ತದೆ. ದೊಡ್ಡ ಮಟ್ಟದಲ್ಲಿ ಮಾಡುವವರು ವೆಬ್ಸೈಟ್ ಓಪನ್ ಮಾಡಬಹುದು. ಇಷ್ಟೇ ಅಲ್ಲ ಯುಟ್ಯೂಬ್ ನಲ್ಲಿ ವಿಡಿಯೋ ಹಾಕಿಯೂ ನೀವು ಹಣ ಗಳಿಸಬಹುದು.

ಅಡುಗೆ ಕಲೆ ಗೊತ್ತಿದ್ದರೆ ಕೈತುಂಬ ಸಂಪಾದನೆ ನಿಶ್ಚಿತ. ಪ್ರತಿಯೊಬ್ಬರಿಗೂ ಅಡುಗೆ ಬರುವುದಿಲ್ಲ. ಮನೆಯಲ್ಲಿ ಮಾಡಿಕೊಳ್ಳಲು ಕೆಲವರಿಗೆ ಸಮಯವಿರುವುದಿಲ್ಲ. ಹೊಟೇಲ್ ಊಟ ಬೇಸರ ತರಿಸಿರುತ್ತದೆ. ಅಂಥವರಿಗೆ ನೀವು ಊಟ ನೀಡಬಹುದು. ಅವ್ರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಊಟ ನೀಡುವ ಕೆಲಸ ಶುರು ಮಾಡಬಹುದು.

ಎಂಟು ಗಂಟೆಗಳ ಕಾಲ ದುಡಿಯಬೇಕೆಂಬ ನಿಯಮವಿಲ್ಲ. ಬರವಣಿಗೆ ಉತ್ತಮವಾಗಿದ್ದರೆ ಸಿಕ್ಕ ಸಮಯದಲ್ಲಿ ಹಣ ಗಳಿಸಬಹುದು. ಮನೆಯಲ್ಲಿಯೇ ಕುಳಿತು ಫ್ರಿಲಾನ್ಸ್ ರೈಟಿಂಗ್ ಶುರು ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...