alex Certify ಗಮನಿಸಿ: 50 ಲಕ್ಷ ಮೀರಿ ಟರ್ನ್ ‌ಓವರ್‌ ಇರುವ ಉದ್ಯಮಗಳ GST ಪಾವತಿ ನಿಯಮದಲ್ಲಿ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: 50 ಲಕ್ಷ ಮೀರಿ ಟರ್ನ್ ‌ಓವರ್‌ ಇರುವ ಉದ್ಯಮಗಳ GST ಪಾವತಿ ನಿಯಮದಲ್ಲಿ ಬದಲಾವಣೆ

ಮಾಸಿಕ 50 ಲಕ್ಷ ರೂ.ಗಳನ್ನು ವಹಿವಾಟು ಮೀರಿದ ಉದ್ಯಮಗಳು ತಮ್ಮ ಪಾಲಿನ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಕನಿಷ್ಠ 1%ರಷ್ಟಾದರೂ ನಗದಿನ ರೂಪದಲ್ಲಿ ಪಾವತಿ ಮಾಡಬೇಕಾಗಿದೆ. ಈ ಕ್ರಮದ ಮೂಲಕ ಸುಳ್ಳು ಬಿಲ್‌ಗಳನ್ನು ಸೃಷ್ಟಿಸುವ ಕೆಲಸಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ವಿತ್ತ ಸಚಿವಾಲಯ ಇಟ್ಟುಕೊಂಡಿದೆ.

ಈ ಸಂಬಂಧ ಕೇಂದ್ರ ಪರೋಕ್ಷ ತೆರಿಗೆ ಹಾಗೂ ಸುಂಕ ಮಂಡಳಿ (ಸಿಬಿಐಸಿ) ಜಿಎಸ್‌ಟಿ ನಿಯಮಾವಳಿಗಳಿಗೆ ತಂದಿರುವ ಬದಲಾವಣೆಗಳನ್ನು ನೋಟಿಫೈ ಮಾಡಿದೆ. ಇನ್‌ಪುಟ್‌ ತೆರಿಗೆ ಕ್ರೆಡಿಟ್ ಮುಖಾಂತರ ತೆರಿಗೆ ಪಾವತಿ ಮಾಡಲು ಕಠಿಣ ನಿಯಮ ತಂದಿದೆ.

ಈ ಸಂಬಂಧ ಜಿಎಸ್‌ಟಿ ನಿಯಮಾವಳಿಯ 86ಬಿ ವಿಧಿಯನ್ನು ಜಾರಿಗೆ ತರಲಾಗಿದ್ದು, ಜನವರಿ 1, 2021ರಿಂದ ಇದು ಅನುಷ್ಠಾನಕ್ಕೆ ಬರಲಿದೆ. ಈ ಮೂಲಕ ಇನ್‌ಪುಟ್‌ ತೆರಿಗೆ ಕ್ರೆಡಿಟ್ ಮೂಲಕ ಜಿಎಸ್‌ಟಿ ತೆರಿಗೆ ಪಾವತಿಯನ್ನು 99%ನಷ್ಟಕ್ಕೆ ಸೀಮಿತ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...