alex Certify ಸ್ವಂತ ವ್ಯವಹಾರ ಶುರು ಮಾಡಲು ಬಯಸುವ ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ವ್ಯವಹಾರ ಶುರು ಮಾಡಲು ಬಯಸುವ ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ಕೊರೊನಾದಿಂದಾಗಿ ಆರ್ಥಿಕವಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸುದೀರ್ಘ ಲಾಕ್‌ ಡೌನ್‌ ಹಂತಹಂತವಾಗಿ ತೆರವುಗೊಳ್ಳುತ್ತಿದ್ದು, ಈ ಮೊದಲಿನಂತೆ ಸಹಜ ಸ್ಥಿತಿಗೆ ಪರಿಸ್ಥಿತಿ ಮರಳುತ್ತಿದೆ. ಆದರೆ ಕೊರೊನಾ ಕಾರಣಕ್ಕೆ ಸಾರ್ವಜನಿಕರು ಸಾರ್ವಜನಿಕ ಸಾರಿಗೆಗಳಾದ ಬಸ್‌, ರೈಲು ಏರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸ್ವಂತ ವಾಹನ ಹೊಂದಿದವರು ಅವುಗಳನ್ನೇ ಬಳಸುತ್ತಿದ್ದು, ಸ್ವಂತ ವಾಹನ ಇಲ್ಲದವರೂ ದುಬಾರಿಯಾದರೂ ಅನಿವಾರ್ಯವಾಗಿ ಬಾಡಿಗೆ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ನಿಮ್ಮ ಬಳಿ ಕಡಿಮೆ ಬಂಡವಾಳವಿದ್ದು, ಒಳ್ಳೆ ಬ್ಯುಸಿನೆಸ್ ಮಾಡಲು ಬಯಸಿದ್ರೆ ಇದನ್ನು ಓದಿ. ನೀವು ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿ ಮಾಡಿ, ಅದನ್ನು ಬಾಡಿಗೆಗೆ ನೀಡಿ ಹಣ ಸಂಪಾದನೆ ಮಾಡಬಹುದು. ಟ್ರಾವೆಲ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಗೆ ಒಳ್ಳೆ ಅವಕಾಶವಿದೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಸಂಪಾದನೆ ಮಾಡಬಹುದಾಗಿದೆ.

ಓಲಾ ಜೊತೆ ಸೇರಿ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ನೀವು ಒಂದೇ ಅಲ್ಲ ಎರಡು ಮೂರು ಕಾರನ್ನು ಕೂಡ ಬಾಡಿಗೆಗೆ ಬಿಡಬಹುದು. ಹೆಚ್ಚೆಚ್ಚು ಕಾರನ್ನು ಬಾಡಿಗೆಗೆ ಬಿಟ್ರೆ ಹೆಚ್ಚೆಚ್ಚು ಹಣ ಸಂಪಾದನೆ ಮಾಡಬಹುದಾಗಿದೆ. ಇದಕ್ಕಾಗಿ ಕಂಪನಿ ವಿಶೇಷ ಸೌಲಭ್ಯ ನೀಡ್ತಿದೆ. ಒಂದೇ ಅಪ್ಲಿಕೇಷನ್ ನಲ್ಲಿ ನೀವು ಟ್ಯಾಕ್ಸಿಯ ಗಳಿಕೆ ಹಾಗೂ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಳಬಹುದು.

ಓಲಾ ಈ ಬಗ್ಗೆ https://partners.olacabs.com/attach  ನಲ್ಲಿ ಹೆಚ್ಚಿನ ಮಾಹಿತಿ ನೀಡಿದೆ. ಇದ್ರಲ್ಲಿ ನೀವು ಏನೇನು ಮಾಹಿತಿ ನೀಡಬೇಕು ಎನ್ನುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಒಂದು ಕಾರಿಗೆ ಒಂದು ತಿಂಗಳಿಗೆ 35 ಸಾವಿರದವರೆಗೆ ನೀವು ಗಳಿಕೆ ಮಾಡಬಹುದು. ಎಷ್ಟು ಕಾರಿದ್ಯೋ ಅದ್ರ ಲೆಕ್ಕದ ಮೇಲೆ ನಿಮ್ಮ ಹಣ ಅಕೌಂಟ್ ಸೇರಲಿದೆ. ನೀವೇ ಚಾಲಕನನ್ನು ನೇಮಕ ಮಾಡಬೇಕಾದ ಕಾರಣ ಅವ್ರಿಗೆ ಹಣ ಪಾವತಿಸಬೇಕಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...