ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಫಿಟ್ನೆಸ್, ಆರೋಗ್ಯ ವೃದ್ಧಿಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಫಿಟ್ನೆಸ್ ಗೆ ಸಂಬಂಧಿಸಿದಂತೆ ಮಾರುಕಟ್ಟೆಗೆ ಸಾಕಷ್ಟು ಸಾಧನ, ಆಹಾರಗಳು ಲಗ್ಗೆಯಿಟ್ಟಿವೆ. ಈ ಸಂದರ್ಭದಲ್ಲಿ ನಿಮಗೂ ಗಳಿಕೆಗೆ ಅವಕಾಶವಿದೆ. ಕಡಿಮೆ ಹೂಡಿಕೆ ಮಾಡಿ ಕೈತುಂಬ ಗಳಿಕೆಗೆ ಸೋಯಾ ಮಿಲ್ಕ್ ಬೆಸ್ಟ್.
ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ, ತನ್ನ ಕಾರ್ಯಕ್ರಮದಲ್ಲಿ ಸೋಯಾ ಹಾಲು ತಯಾರಿಸುವುದನ್ನೂ ಸೇರಿಸಿದೆ. ಸೋಯಾ ಹಾಲು ತಯಾರಿಸುವ ವಿಧಾನದ ಬಗ್ಗೆ ತರಬೇತಿ ನೀಡಲಾಗುತ್ತದೆ. ಪ್ರಧಾನಿ ಉದ್ಯೋಗ ಉತ್ಪಾದನಾ ಕಾರ್ಯಕ್ರಮದಡಿ ಶೇಕಡಾ 80ರಷ್ಟು ಸಾಲವನ್ನು ಸಹ ನೀಡಲಾಗುತ್ತದೆ. ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ಬಳಿ ಕೇವಲ ಒಂದು ಲಕ್ಷ ರೂಪಾಯಿಗಳಿದ್ದರೆ, ಸೋಯಾ ಹಾಲು ತಯಾರಿಸುವ ಘಟಕವನ್ನು ಪ್ರಾರಂಭಿಸಬಹುದು.
ಸೋಯಾ ಹಾಲಿನ ಘಟಕ ಸ್ಥಾಪನೆಗೆ 11 ಲಕ್ಷ ರೂಪಾಯಿಯ ಅವಶ್ಯಕತೆಯಿದೆ. ಯೋಜನಾ ವರದಿ ಆಧಾರದ ಮೇಲೆ ಬ್ಯಾಂಕ್ ಗಳು ನಿಮಗೆ ಸಾಲ ನೀಡುತ್ತವೆ. ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ, ತಾಂತ್ರಿಕ ಸೇವಾ ಕೇಂದ್ರಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಾರಂಭಿಸಿದೆ. ಇದ್ರಲ್ಲಿ ನಿಮಗೆ ತರಬೇತಿ ನೀಡಲಾಗುವುದು. http://www.nsic.co.in/NTSC/Main.aspx ನಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.