alex Certify BIG NEWS: ತೆರಿಗೆಯಲ್ಲಿ ಹೊಸ ಪದ್ಧತಿ; ಆದಾಯದ ಬದಲು ಖರ್ಚು, ವೆಚ್ಚಕ್ಕೆ ಟ್ಯಾಕ್ಸ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತೆರಿಗೆಯಲ್ಲಿ ಹೊಸ ಪದ್ಧತಿ; ಆದಾಯದ ಬದಲು ಖರ್ಚು, ವೆಚ್ಚಕ್ಕೆ ಟ್ಯಾಕ್ಸ್…?

ನವದೆಹಲಿ: ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಸುಧಾರಣೆ ಬಗ್ಗೆ ಸಲಹೆ ನಿರೀಕ್ಷಿಸಿದ್ದಾರೆ. ವೈಯಕ್ತಿಕ ಆದಾಯದ ತೆರಿಗೆ ಬದಲಿಗೆ ಖರ್ಚು-ವೆಚ್ಚದ ಮೇಲೆ ತೆರಿಗೆ ವಿಧಿಸುವ ಪದ್ಧತಿ ಬಜೆಟ್ನಲ್ಲಿ ಘೋಷಣೆಯಾಗಲಿದೆಯೇ ಎಂದು ಚರ್ಚೆ ನಡೆದಿದೆ.

ತೆರಿಗೆ ಸುಧಾರಣೆ ಕುರಿತು ಕೆಲವರು ಸಲಹೆ ನೀಡಿದ್ದು, ಆದಾಯ ತೆರಿಗೆ ರದ್ದು ಮಾಡಿ ವೆಚ್ಚದ ಮೇಲೆ ತೆರಿಗೆ ಸಂಗ್ರಹಿಸಲು ಸಲಹೆ ನೀಡಲಾಗಿದೆ. ಆದಾಯ ತೆರಿಗೆ ರೀತಿಯಲ್ಲಿಯೇ ವೆಚ್ಚ ತೆರಿಗೆ ವ್ಯವಸ್ಥೆ ಇರಲಿದ್ದು, ಇದು ವ್ಯಕ್ತಿಯ ಆದಾಯದ ಬದಲು ಆತ ಖರ್ಚು ಮಾಡುವ ವೆಚ್ಚವನ್ನು ಅವಲಂಬಿಸಿ ವಿಧಿಸುವ ತೆರಿಗೆಯಾಗಿದೆ. ಆದರೆ ಇನ್ನೂ ಪ್ರಾಥಮಿಕ ಚರ್ಚೆಯ ಹಂತದಲ್ಲಿದೆ. ಸದ್ಯಕ್ಕೆ ಜಾರಿಯಾಗುವ ನಿರೀಕ್ಷೆ ಇಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...