alex Certify NPS ಉದ್ಯೋಗಿಗಳಿಗೆ ಗುಡ್ ನ್ಯೂಸ್, 4800 ರೂ. ಉಳಿತಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NPS ಉದ್ಯೋಗಿಗಳಿಗೆ ಗುಡ್ ನ್ಯೂಸ್, 4800 ರೂ. ಉಳಿತಾಯ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದು, ಅವರು ವೇತನದಾರರಿಗೆ ಅನುಕೂಲಕರ ಘೋಷಣೆ ಮಾಡಿದ್ದಾರೆ. ಆದಾಯ ತೆರಿಗೆ ರಿಟರ್ನ್‌ ನಲ್ಲಿ, ಈಗ ತೆರಿಗೆದಾರರು ಹಳೆಯ ಐಟಿ ರಿಟರ್ನ್‌ಗಳನ್ನು 2 ವರ್ಷಗಳವರೆಗೆ ಹಿಂತಿರುಗಿಸಲು ಸಾಧ್ಯವಾಗುತ್ತದೆ. ಈಗ ಶೇ. 10 ರ ಬದಲಿಗೆ ಶೇ. 14 ರಷ್ಟು NPS ನಲ್ಲಿ ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಉದ್ಯೋಗಿಯ ಸಂಬಳ ಮತ್ತು ತೆರಿಗೆ ಕಡಿತದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿ.

ಹೊಸ ಘೋಷಣೆಯ ನಂತರ ಎಷ್ಟು ತೆರಿಗೆ ಉಳಿತಾಯವಾಗಲಿದೆ..?

ಸರ್ಕಾರದ ಬಜೆಟ್ ಘೋಷಣೆಯು ಉದ್ಯೋಗಿಗೆ ನೀಡುವ ತೆರಿಗೆ ವಿನಾಯಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಉದ್ಯೋಗಿಯ ಮೂಲ ಮತ್ತು ಡಿಎ 50 ಸಾವಿರ ರೂಪಾಯಿಗಳಾಗಿದ್ದರೆ, ಎನ್‌.ಪಿ.ಎಸ್‌.ನಲ್ಲಿ ಅವರ ಕೊಡುಗೆ ಶೇಕಡಾ 10 ರಷ್ಟಿರುತ್ತದೆ, ಅಂದರೆ 5 ಸಾವಿರ ರೂಪಾಯಿಗಳು. ಈಗ ಇದಾದ ನಂತರ ಸರ್ಕಾರದಿಂದ 7 ಸಾವಿರ ರೂ. ಕೊಡುಗೆ ಬರಲಿದೆ. ಒಬ್ಬ ಉದ್ಯೋಗಿ ಶೇ.20 ರ ತೆರಿಗೆ ಸ್ಲ್ಯಾಬ್‌ಗೆ ಬಂದರೆ, ಇಲ್ಲಿಯವರೆಗೆ ಉದ್ಯೋಗದಾತರಲ್ಲಿ ಕೇವಲ 10 ಪ್ರತಿಶತ ಅಂದರೆ 5 ಸಾವಿರ ತೆರಿಗೆ ವಿನಾಯಿತಿ ಇತ್ತು. ಉಳಿದ 2000 ರೂ.ಗೆ ಶೇ.20 ಅಂದರೆ 400 ತೆರಿಗೆ ಕಟ್ಟಬೇಕಿತ್ತು. ಆದರೆ ಈಗ ಹಣಕಾಸು ಸಚಿವರ ಹೊಸ ಘೋಷಣೆಯ ನಂತರ, ಉದ್ಯೋಗಿಯು ಸಂಪೂರ್ಣ ಶೇಕಡ 14 ರಷ್ಟು ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅವರು ಪ್ರತಿ ತಿಂಗಳು 400 ರೂ.ಗಳನ್ನು ಉಳಿಸುತ್ತಾರೆ.

ಸರ್ಕಾರಿ ನೌಕರರಿಗೆ NPS ತೆರಿಗೆ ವಿನಾಯಿತಿ ಹೆಚ್ಚಳ

ಈಗ ಎನ್‌.ಪಿ.ಎಸ್‌.ನಲ್ಲಿ ಶೇ.10 ರ ಬದಲು ಶೇ.14 ರಷ್ಟು ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಅಂದರೆ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್. ಯೋಜನೆಯಲ್ಲಿ ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಹೊಸ ತೆರಿಗೆ ಸುಧಾರಣೆ ತರುವ ಯೋಜನೆಯನ್ನು ಹಣಕಾಸು ಸಚಿವರು ಪ್ರಕಟಿಸಿದರು. ನೌಕರರು ಪಿಂಚಣಿ ಮೇಲೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಅದೇ ಸಮಯದಲ್ಲಿ, ಎನ್‌.ಪಿ.ಎಸ್‌.ನಲ್ಲಿ ಕೇಂದ್ರ ಮತ್ತು ರಾಜ್ಯದ ಕೊಡುಗೆ ಈಗ ಶೇ. 14 ರಷ್ಟು ಆಗಿರುತ್ತದೆ.

ಕಾರ್ಪೊರೇಟ್ ತೆರಿಗೆ ಕಡಿಮೆ ಪ್ರಸ್ತಾಪ

ಬಜೆಟ್ ಭಾಷಣದ ವೇಳೆ ಹಣಕಾಸು ಸಚಿವರು ಕಾರ್ಪೊರೇಟ್ ತೆರಿಗೆಯನ್ನು ಶೇ.18 ರಿಂದ ಶೇ.15 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಸರ್ಚಾರ್ಜ್ ಶೇ.12 ರಿಂದ ಶೇ.7 ಕ್ಕೆ ಇಳಿಕೆಯಾಗಲಿದೆ. ಸಹಕಾರಿ ಸಂಸ್ಥೆಗಳಿಗೂ ಉತ್ತೇಜನ ನೀಡಲಾಗುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...